ಮಂಗಳೂರು: ನಗರದ ನ್ಯೂ ಮಂಗಳೂರು ಪೋರ್ಟ್ ಟ್ರಸ್ಟ್ (ಎನ್‍ಎಂಪಿಟಿ) ಬಂದರಿನಲ್ಲಿ ಹಡಗಿನ ಟ್ಯಾಂಕರ್ ಒಡೆದ ಪರಿಣಾಮ ಸುಮಾರು 150 ಲೀಟರಿಗೂ ಅಧಿಕ ಪ್ರಮಾಣದ ತೈಲ ಸಮುದ್ರಕ್ಕೆ ಸೇರಿದೆ.ಶ್ರೀಲಂಕಾದ ಕೊಲಂಬೋದಿಂದ ಬಂದಿದ್ದ ಎಂ.ವಿ. ಎಕ್ಸ್‌ಪ್ರೆಸ್‌ ಬ್ರಹ್ಮಪುತ್ರ ಹಡಗಿನ ಟ್ಯಾಂಕರ್ ಒಡೆದ ಪರಿಣಾಮ, 150 ಲೀಟರಿಗೂ ಅಧಿಕ ಪ್ರಮಾಣದ ತೈಲ ಸಮುದ್ರ ಸೇರಿದೆ. ನಗರದ ಎನ್‍ಎಂಪಿಟಿ ಬಂದರಿನಿಂದ ಕಂಟೈನರ್ ಲೋಡ್ ಮಾಡಿ ಹಿಂದಿರುಗುವ ವೇಳೆ ಈ ಅವಘಡ ನಡೆದಿದೆ.ಮಾಹಿತಿಗಳ ಪ್ರಕಾರ ಹಡಗನ್ನು ಟಗ್‍ನಲ್ಲಿ ಬಂದರಿನ ಜೆಟ್ಟಿಯಿಂದ ಹೊರಕ್ಕೆ ಒಯ್ಯಲಾಗುತ್ತಿತ್ತು. ಈ ವೇಳೆ ಜೆಟ್ಟಿಯ ಗೋಡೆ ಹಡಗಿನಲ್ಲಿದ್ದ ಟ್ಯಾಂಕರ್ ಗೆ ಬಡಿದ ಪರಿಣಾಮ, ಟ್ಯಾಂಕರ್ ನಿಂದ ತೈಲ ಸೋರಿಕೆಯಾಗಿದೆ. ಕೂಡಲೇ ಎಚ್ಚೆತ್ತ ಹಡಗಿನ ಸಿಬ್ಬಂದಿ ಹಾಗೂ ಸ್ಥಳೀಯರು ಸೋರಿಕೆಯನ್ನು ತಡೆದು, ಸಮುದ್ರದಲ್ಲಿ ತೈಲ ಹರಡದಂತೆ ಕ್ರಮ ವಹಿಸಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


