ರಾಮನಗರ: ರಾಮನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮತದಾನ ಮಾಡಲು ವೀಲ್ ಚೇರ್ ನೀಡದ ಹಿನ್ನೆಲೆಯಲ್ಲಿ ಶತಾಯುಷಿ ಮಹಿಳೆಯನ್ನು ಸ್ಥಳೀಯರೇ ಕರೆತಂದು ಮತದಾನ ಮಾಡಿಸಿದ್ದಾರೆ.ರಾಮನಗರ ತಾಲೂಕಿನ ಗಂಗರಾಜನಹಳ್ಳಿಯ ಮತಗಟ್ಟೆ ಸಂಖ್ಯೆ 47 ರಲ್ಲಿ 103 ವರ್ಷದ ಭದ್ರಕಾಳಮ್ಮ ಮತದಾನ ಮಾಡಿದ್ದಾರೆ. ಭದ್ರಕಾಳಮ್ಮ ಅವರು ಮತಗಟ್ಟೆಯಿಂದ 500 ಮೀಟರ್ ದೂರದ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಇವರು ಮತದಾನ ಮಾಡಲು ಗಂಗರಾಜನಹಳ್ಳಿ ಮತಗಟ್ಟೆ ಸಂಖ್ಯೆ 47ಕ್ಕೆ ಬರಬೇಕಿತ್ತು. ಇದಕ್ಕೆ ಚುನಾವಣಾಧಿಕಾರಿಗಳು ಮತಗಟ್ಟೆಗೆ ಆಟೋ ವ್ಯವಸ್ಥೆ, ವೀಲ್ ಚೇರ್ ವ್ಯವಸ್ಥೆ ಮಾಡಿರಲಿಲ್ಲ. ಇದರಿಂದ ಸ್ಥಳೀಯರೇ ಬಾಡಿಗೆ ಆಟೋದಲ್ಲಿ ಕರೆತಂದು ಮತದಾನ ಮಾಡಿಸಿದ್ದಾರೆ.ಇದೇ ಗ್ರಾಮದ ಎರಡೂ ಕಣ್ಣು ಕಾಣದ ಅಂಧ ಮಹಿಳೆ ಧಾಕ್ಷಾಯಿಣಿಯನ್ನು ಸಹ ಆಟೋದಲ್ಲೇ ಕರೆತಂದು ಮತದಾನ ಮಾಡಿಸಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


