ಬೆಂಗಳೂರು: ನಕಲಿ ಚಿನ್ನ ಇಟ್ಟು ಒರಿಜಿನಲ್ ಚಿನ್ನ ಕದಿಯುತ್ತಿದ್ದ ಮಹಿಳೆಯನ್ನು ನಗರದ ಪೊಲೀಸರು ಬಂಧಿಸಿದ್ದಾರೆ.ಶಿವಾಜಿನಗರ ನಿವಾಸಿ ಶಾಂತಿ ಬಂಧನಕೊಳಗಾದ ಮಹಿಳೆ. ಮನೆ ಕೆಲಸದ ನೆಪದಲ್ಲಿ ಹೈಫೈ ಮನೆಗಳಿಗೆ ಎಂಟ್ರಿ ಕೊಡುತ್ತಿದ್ದ ಶಾಂತಿ, ಆ ಮನೆಯಲ್ಲಿ ಕೆಲ ದಿನ ಕೆಲಸ ಮಾಡಿ ಅಸಲಿ ಚಿನ್ನವನ್ನು ಕದ್ದು ನಕಲಿ ಚಿನ್ನವಿಟ್ಟು ಎಸ್ಕೇಪ್ ಆಗುತ್ತಿದ್ದಳು. ಇದೇ ರೀತಿ ಕೋರಮಂಗಲದ ಮೂರನೇ ಬ್ಲಾಕ್‍ನಲ್ಲಿರೊ ರಹೇಜಾ ರೆಸಿಡೆನ್ಸಿ ಅಪಾರ್ಟ್ ಮೆಂಟ್ ನಲ್ಲಿ ತನ್ನ ಕೈ ಚಳಕವನ್ನು ತೋರಿಸಿ ಶಾಂತಿ ಸಿಕ್ಕಿಬಿದ್ದಿದ್ದಾಳೆ.ಅಷ್ಟೇ ಅಲ್ಲದೇ ಕೋರಮಂಗಲದ ದೇವಕಿ ಎಂಬವರ ಮನೆಯಲ್ಲಿಯೂ ಮಾಂಗಲ್ಯ ಸರ ಸೇರಿ ಒಟ್ಟು 170 ಗ್ರಾಂ ಚಿನ್ನ ಕದ್ದಿದ್ದಳು. ಈ ಘಟನೆಗೆ ಸಂಬಂಧಪಟ್ಟಂತೆ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಶಾಂತಿಯನ್ನು ಬಂಧಿಸಲಾಗಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


