ಬೆಂಗಳೂರು: ರಾಮನಗರದ ಬಿಜೆಪಿ ಅಭ್ಯರ್ಥಿ ಎಲ್. ಚಂದ್ರಶೇಖರ್ ಅವರನ್ನು ಸಚಿವ ಡಿಕೆ ಶಿವಕುಮಾರ್ ಸಹೋದರರು ದುಡ್ಡು ಕೊಟ್ಟು ಖರೀದಿ ಮಾಡಿದ್ದಾರೆ ಎನ್ನುವ ಆರೋಪಕ್ಕೆ ನಾವು ಬಡವರು, ನಾವೇನು ಮಾಡೋಣ ಎಂದು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.ನನಗೆ ಈ ಅಪರೇಶನ್ ಬಗ್ಗೆ ಗಮನವಿಲ್ಲ. ಅಕ್ಟೋಬರ್ 6 ರಂದು ಬಿಜೆಪಿ ಸರ್ಕಾರ ರಚನೆ ಮಾಡಲಿದೆ. ಇದು ಮಾತ್ರ ನನ್ನ ಗಮನದಲ್ಲಿದೆ. ಸಿ.ಪಿ ಯೋಗೇಶ್ವರ್, ಅಶ್ವತ್ಥ್ ನಾರಾಯಣ್, ಬಿಜೆಪಿ ಮುಖಂಡರು, ಶಾಸಕರು ಹಾಗೂ ಸಚಿವರು ಹಣದ ಮೂಟೆಗಳನ್ನು ನಮ್ಮ ಶಾಸಕರಿಗೆ ತೆಗೆದುಕೊಳ್ಳಿ ಎಂದು ಹೇಳಿದ್ದಾರೆ. ಹಾಗಾಗಿ ಅವರು 6ನೇ ತಾರೀಖು ಸರ್ಕಾರ ರಚನೆ ಮಾಡಬೇಕು ಎಂದುಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.ನನಗೆ ಈ ವಿಷಯದ ಬಗ್ಗೆ ಏನೂ ಗೊತ್ತಿಲ್ಲ. ನನಗೆ ರಾಮನಗರದ ಬಗ್ಗೆ ಏನೂ ಗೊತ್ತಿಲ್ಲ. ಬಿಜೆಪಿಯವರು ಮಾತ್ರ ಅಪರೇಶನ್ ಮಾಡಲು ಸಾಧ್ಯ. ಬಿಜೆಪಿಯವರು ಇದರಲ್ಲಿ ನಿಸ್ಸೀಮರು. ಬಿಜೆಪಿಯವರು ರಾಜಕಾರಣದ ಪ್ರತಿ ಹಂತದಲ್ಲಿ ಹಣ ನೀಡಿ ಮುಂದೆ ಬಂದವರು. ಇದು ಅವರ ನಿತ್ಯ ಜೀವನ. ಹಾಗಾಗಿ ಅವರು ನಾನು ಹಣ ನೀಡಿ ಖರೀದಿ ಮಾಡಿದ್ದೇನೆ ಎಂದು ಹೇಳುತ್ತಿದ್ದಾರೆ ಎಂದು ಆರೋಪಿಸಿದರು.ರಾಘವೇಂದ್ರ ಅವರು ಈ ಬಗ್ಗೆ ಹೇಳಿ ಇದು ಒಂದು ಪಾಠ ಎಂದು ಹೇಳಿದ್ದಾರೆ. ನನಗೆ ಈ ಬಗ್ಗೆ ಯಾವ ವಿಷಯನೂ ಗೊತ್ತಿಲ್ಲ. ಬಳ್ಳಾರಿ ಬಡವರನ್ನು ನನಗೆ ಬಿಟ್ಟುಬಿಡಿ. ನಾನು ಅವರ ಸೇವೆ ಮಾಡುತ್ತೇನೆ ಎಂದು ಡಿ.ಕೆ ಶಿವಕುಮಾರ್ ಹೇಳಿದರು.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


