ಬೆಂಗಳೂರು: ಭಾರತೀಯ ಸಿನಿಮಾ ರಂಗದಲ್ಲಿಯೇ ಮೀಟೂ ಅಭಿಯಾನವೂ ಸುದ್ದಿಯಾಗುತ್ತಿದೆ. ಈಗ ಸ್ಯಾಂಡಲ್‍ವುಡ್ ನಲ್ಲಿ ಶೃತಿ ಹರಿಹರನ್ ಬೆನ್ನಲ್ಲೇ ಮಿಲನ ಸಿನಿಮಾದ ನಟಿ ಪಾರ್ವತಿ ಮೆನನ್ ಮೀಟೂ ಆರೋಪ ಮಾಡಿದ್ದಾರೆ.ನಾನೀಗ ಮಾತನಾಡಿದರೆ ಮಹಿಳೆ ಅನ್ನೋ ಕಾರಣಕ್ಕೆ ಹೀಗಳೆಯಬಹುದು. ಎಂದೋ ಆದ ಘಟನೆ ಕಿರುಕುಳವನ್ನು  ಈಗ ಯಾಕೆ ಹೇಳುತ್ತಿದ್ದಾರೆ ಅಂದುಕೊಳ್ಳಬಹುದು. ಆದರೆ ಸಂತ್ರಸ್ತರ ಸ್ಥಿತಿ, ನೋವು ಅವರಿಗಷ್ಟೇ ಗೊತ್ತಿರುತ್ತೆ. ಆ ಒಂದು ಕಿರುಕುಳ, ಆ ಒಂದು ಘಟನೆ ಮಾನಸಿಕ ಸ್ಥಿತಿ ಮೇಲೆ ಪರಿಣಾಮ ಬೀರುತ್ತೆದೆ. ನನಗೂ ಹಾಗೇ ಆಗಿತ್ತು. 12 ವರ್ಷಗಳ ನಂತರ ನನಗೆ ಆದ ಕಿರುಕುಳ ಅರಿವಿಗೆ ಬಂದಿದೆ ಎಂದು ಪಾರ್ವತಿ ಹೇಳಿಕೊಂಡಿದ್ದಾರೆ.ಪಾರ್ವತಿ ಮೆನನ್ ಅವರಿಗೆ ಮೂರರ ಪ್ರಾಯದಲ್ಲಿ ಲೈಂಗಿಕ ಕಿರುಕುಳದ ಅನುಭವವಾಗಿತ್ತಂತೆ. ಆದರೆ 13 ವರ್ಷಗಳ ನಂತರ ಆ ಬಗ್ಗೆ ಅವರಿಗೆ ಬಂದಿದೆ. ಆದ್ದರಿಂದ ಈಗ ಪಾರ್ವತಿ ಅವರು ತಮಗಾದ ಮೀಟೂ ಅನುಭವವನ್ನು ಹೇಳಿಕೊಂಡಿದ್ದಾರೆ. ಆದರೆ ಅವರಿಗೆ ಲೈಂಗಿಕ ಕಿರುಕುಳ ಕೊಟ್ಟಿದ್ದು ಯಾರು ಎಂಬ ಬಗ್ಗೆ ಮಾಹಿತಿ ನೀಡಿಲ್ಲ.ಪಾರ್ವತಿ ಮೆನನ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ‘ಮಿಲನ’ ಮತ್ತು ಸೆಂಚುರಿ ಸ್ಟಾರ್ ಶಿವಣ್ಣ ಅಭಿನಯದ ‘ಅಂದರ್ ಬಾಹರ್’ ಸಿನಿಮಾದಲ್ಲಿ ಅಭಿನಯಿಸಿದ್ದರು.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


