ಮೈಸೂರು: ಕೋಟಿ ರೂಪಾಯಿ ಹುಂಡಿ ಹಣ ಸಂಗ್ರಹವಾಗುವ ದೇವಸ್ಥಾನಗಳ ಪಟ್ಟಿಗೆ ಮೈಸೂರಿನ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇಗುಲ ಮತ್ತೇ ಸೇರ್ಪಡೆಯಾಗಿದೆ.ಕಳೆದ ಬಾರಿಯಂತೆ ಈ ಬಾರಿ ಹುಂಡಿಯೊಂದರಲ್ಲೇ ಕೋಟಿ ಹಣ ಸಂಗ್ರಹವಾಗಿದೆ. ಕಳೆದ ಬಾರಿಗಿಂತ 7 ಲಕ್ಷ ರೂ. ಹೆಚ್ಚಿನ ಹಣ ಹುಂಡಿಯಲ್ಲಿ ಸಂಗ್ರಹವಾಗಿದ್ದು, ಕಾವೇರಿ ಗ್ರಾಮೀಣ ಬ್ಯಾಂಕ್‍ನ ಸಿಬ್ಬಂದಿ ಹುಂಡಿ ಏಣಿಕೆ ಕಾರ್ಯ ನಡೆಸಿದ್ದಾರೆ.ಒಂದೂವರೆ ತಿಂಗಳ ಬಳಿಕ ಎಣಿಕೆಯಾದ ದೇವಾಲಯದ 7 ಹುಂಡಿಯಲ್ಲಿ ಬರೋಬ್ಬರಿ 1 ಕೋಟಿ, 27 ಲಕ್ಷದ 67 ಸಾವಿರದ 605 ರೂ.(1,27,67,605) ಸಂಗ್ರಹವಾಗಿದೆ. ಹುಂಡಿಯಲ್ಲಿ ಒಟ್ಟು 34 ವಿದೇಶಿ ಕರೆನ್ಸಿ ಪತ್ತೆಯಾಗಿದ್ದು, ಚಿನ್ನ ಮತ್ತು ಬೆಳ್ಳಿ ಮುಂದಿನ ದಿನಗಳಲ್ಲಿ ಏಣಿಕೆಯಾಗುವ ಬಗ್ಗೆ ದೇವಾಲಯದ ಕಾರ್ಯನಿರ್ವಾಹಕಾಧಿಕಾರಿ ಪ್ರಸಾದ್ ಮಾಹಿತಿ ನೀಡಿದ್ದಾರೆ.ಕಾವೇರಿ ಗ್ರಾಮೀಣ ಬ್ಯಾಂಕ್‍ನ 35 ಮಂದಿ ಸಿಬ್ಬಂದಿ ಹುಂಡಿ ಹಣ ಎಣಿಕೆ ಕಾರ್ಯನಡೆಸಿದ್ದು, ಕಳೆದ ಬಾರಿ 1 ಕೋಟಿ 20 ಲಕ್ಷ ರೂ. ಹಣ ಹುಂಡಿಯಲ್ಲಿ ಸಂಗ್ರಹವಾಗಿತ್ತು.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


