ಕೊಪ್ಪಳ: ಕೌನ್ ಬನೇಗಾ ಕರೋಡ್ ಪತಿ ಹೆಸರು ಹೇಳಿಕೊಂಡು ಯುವಕನಿಗೆ ವಂಚಿಸಲು ಯತ್ನಿಸಿದ ಘಟನೆ ಕೊಪ್ಪಳದಲ್ಲಿ ನೆಡದಿದೆ.ಕವಲೂರು ಗ್ರಾಮದ ಶ್ರೀಕಾಂತ್ ಎಂಬವರಿಗೆ ಕರೆಯೊಂದು ಬಂದಿದೆ. ನೀವು ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಕೌನ್ ಬನೇಗಾ ಕರೋಡ್ ಪತಿಯಲ್ಲಿ ಜಯಶಾಲಿ ಆಗಿದ್ದು, 25 ಲಕ್ಷ ರೂ. ನಿಮ್ಮದಾಗಿದೆ ಅಂತಾ ಹೇಳಿದ್ದಾರೆ. ಈ ವೇಳೆ ಕರೆ ಮಾಡಿದ್ದ ವ್ಯಕ್ತಿಯ ಪರಿಚಯ ಕೇಳಿದಾಗ ತನ್ನ ಹೆಸರು ರೋಹಿತ್, ಕೋಲ್ಕತ್ತಾ ಕಚೇರಿಯಿಂದ ಕರೆ ಮಾಡಿದ್ದಾಗಿ ಹೇಳಿದ್ದಾನೆ. 25 ಲಕ್ಷ ರೂ. ಹೇಳಿದ ಕ್ಷಣ ಶ್ರೀಕಾಂತ್ ಖಷಿಯಾಗಿದ್ದಾರೆ. 25 ಲಕ್ಷ ರೂ. ಇದೇ ವೇಳೆ ನಿಮ್ಮ ಖಾತೆಗೆ ಬರಬೇಕೆಂದು ಕೆಲವು ಕಂಡೀಷನ್ ಗಳನ್ನು ಹೇಳಿದ್ದಾನೆ.ಕಂಡೀಷನ್ ಕೇಳಿ ಸುಸ್ತಾದ ಶ್ರೀಕಾಂತ್?
ಪ್ರತಿ ಒಂದು ಲಕ್ಷಕ್ಕೆ ಒಂದು ಪಿನ್ ಕೋಡ್ ಓಪನ್ ಆಗುತ್ತೆ. ಅಂದರೆ ಆ ಪಿನ್ ಕೋಡ್ ಓಪನ್ ಮಾಡಬೇಕಾದರೆ ನಾವು ಒಂದು ಲಕ್ಷಕ್ಕೆ ಒಂದು ಸಾವಿರ ರೂ. ಹಣವನ್ನು ಅವರ ಖಾತೆಗೆ ಹಾಕಬೇಕು. ಅದರಂತೆ ನಿಮ್ಮ 25 ಲಕ್ಷ ಹಣಕ್ಕಾಗಿ ನೀವು 25 ಸಾವಿರ ರೂ. ಹಣ ನಮ್ಮ ಖಾತೆಗೆ ಜಮಾ ಮಾಡಿದ ತಕ್ಷಣ ನಿಮ್ಮ ಖಾತೆಗೆ 25 ಲಕ್ಷ ಹಣ ಜಮಾ ಆಗುತ್ತೆ ಅಂತಾ ರೋಹಿತ್ ಹೇಳಿದ್ದಾನೆ. ಕಂಡೀಷನ್ ಕೇಳಿದ ಶ್ರೀಕಾಂತ್ ನಿಮ್ಮ ಹಣ ನನಗೆ ಬೇಡ ಅಂತಾ ಹೇಳಿ ಫೋನ್ ಕಟ್ ಮಾಡಿದ್ದಾರೆ.ಇಷ್ಟಕ್ಕೆ ಸುಮ್ಮನಾಗದ ವಂಚಕ ವಾಟ್ಸಪ್ ಮುಖಾಂತರ ತನ್ನ ಫೋಟೋ, 25 ಲಕ್ಷ ರೂ. ಬರೆದಿರುವ ನಕಲಿ ಚೆಕ್ ಮತ್ತು ಹಣದ ರಾಶಿ ಇರುವ ವಿಡಿಯೋ ಕಳುಹಿಸಿದ್ದಾನೆ. ಶ್ರೀಕಾಂತ್ ಅವರಿಗೆ ಪದೇ ಪದೇ ಕರೆ ಮಾಡುತ್ತಿರುವ ವಂಚಕರು 25 ಸಾವಿರ ರೂ. ಹಣ ಹಾಕುವಂತೆ ತಮ್ಮ ಮೃದುವಾದ ಮಾತುಗಳಿಂದ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ. ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮವನ್ನು ನಾನು ನೋಡುವುದಿಲ್ಲ. ಅದರ ಬಗ್ಗೆ ಕೇಳಿದ್ದೇನೆ ಹೊರತು ನೋಡಲು ನನಗೆ ಅದು ಅರ್ಥವಾಗಲ್ಲ. ಆದರೂ ರೋಹಿತ್ ಎಂಬಾತ ಕರೆ ಮಾಡುತ್ತಿದ್ದಾನೆ ಅಂತ ಶ್ರೀಕಾಂತ್ ಕಿಡಿಕಾರಿದ್ದಾರೆ.ಇತ್ತ ಮಂಗಳೂರು ಮೂಲದ ಯುವತಿಗೂ ಇದೇ ರೀತಿಯ ಮೆಸೇಜ್ ಬಂದಿದೆ. ವಾಟ್ಸಪ್ ಗೆ ಮೆಸೇಜ್ ಬಂದಾಗ ಯಾರಾದರೂ ಫ್ರೆಂಡ್ಸ್ ಮೆಸೇಜ್ ಮಾಡಿರಬಹುದು ಎಂದು ತಿಳಿದುಬಂದಿದೆ. ತದನಂತರ ಇದೊಂದು ಆನ್‍ಲೈನ್ ವಂಚಕರ ಗುಂಪು ಎಂಬುದು ನನಗೆ ಮನವರಿಕೆ ಆಯಿತು. ನಾನು ಕಾರ್ಯಕ್ರಮದ ಯಾವುದೇ ಆ್ಯಪ್ ಡೌನ್‍ಲೋಡ್ ಮಾಡಿಕೊಂಡಿಲ್ಲ. ನಾನು ಸ್ಪರ್ಧೆಯಲ್ಲಿಯೂ ಭಾಗಿಯಾಗಿಲ್ಲ ಎಂದು ಹೆಸರು ಹೇಳಲು ಇಚ್ಛಿಸದ ಯುವತಿ ಪಬ್ಲಿಕ್ ಟಿವಿಗೆ ಹೇಳಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


