ಶಿವಮೊಗ್ಗ: ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಅವರು ಸುಳ್ಳಿನ ಕಂತೆ ಹೇಳ್ತಾರೆ. ಕುಮಾರಸ್ವಾಮಿ ಮೀಟೂನಲ್ಲಿ ಸಿಕ್ಕಿ ಹಾಕಿಕೊಳ್ತಾರೆ. ಶೋಷಣೆಯಾದವರು ಮುಂದೆ ಬರ್ತಾರೆ ಅಂತ ಶಾಸಕ ಕುಮಾರ ಬಂಗಾರಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ.ಶಿವಮೊಗ್ಗ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸುಳ್ಳಿಗೆ ಯಾವತ್ತೂ ಸಾಕ್ಷಿಗಳಿರುವುದಿಲ್ಲ. ಇದೇ ತರದ ಮಾತುಗಳನ್ನು ಆಡಿದ್ರೆ ನಿಮ್ಮ ವೈಯಕ್ತಿಕ ವಿಚಾರಗಳನ್ನು ನೀವು ಅನೇಕ ಕಡೆ ಸಾಕ್ಷಿ ಸಮೇತ ಮಾತನಾಡಿದ್ದೀರೋ, ಎಲ್ಲಾದರೂ ನೀವು ಹೆಚ್ಚು ಕಮ್ಮಿ ಮಾತನಾಡಿದ್ದರೆ ಮೀಟೂ ನಲ್ಲಿ ನೀವು ಪ್ರಸ್ತಾಪ ಆಗ್ತೀರಾ. ಮೀಟೂ ನಲ್ಲಿ ನೀವು ನೇರವಾಗಿ ಬಂದು ಸಿಕ್ಕಿ ಹಾಕಿಕೊಳ್ಳುತ್ತೀರಿ ಅಂತಹ ಕೆಲಸಗಳನ್ನು ನೀವು ಮಾಡಿದ್ದೀರಾ ಅಂತ ವಾಗ್ದಾಳಿ ನಡೆಸಿದ್ರು.ಕುಮಾರಸ್ವಾಮಿ ದಿವಂಗತ ಬಂಗಾರಪ್ಪ ಸಮಾಧಿ ಬಳಿ ಟೆಂಟ್ ಹಾಕೊಂಡು ಹೋಗಿದ್ರು. ಅವರ ಹಿರಿಮಗ ಹಿಂಗೆ ಮಾಡಿದ್ರು ಅಂತಾ ಮಾತಾಡ್ತಾರೆ. ನಿಜವಾದ ಕಾಳಜಿ ಇದ್ರೆ ಬಂಗಾರಪ್ಪ ಅವರ ಕೊಡುಗೆಗಳ ಬಗ್ಗೆ ಮಾತಾಡಿ. ಕುಮಾರಸ್ವಾಮಿ ಅವರೇ ನಿಮ್ಮ ದೊಂಬರಾಟವನ್ನು ಬಿಟ್ಟು ಬಿಡಿ ಅಂತ ಕಿಡಿಕಾರಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


