ಮೈಸೂರು: ಪರ ಸ್ತ್ರೀ ಜೊತೆ ಚಕ್ಕಂದವಾಡುತ್ತಿದ್ದಾಗ ಸಿಕ್ಕಿಬಿದ್ದ ವ್ಯಕ್ತಿಯೊಬ್ಬನಿಗೆ ಗ್ರಾಮಸ್ಥರು ಗೂಸಾ ನೀಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.ಮೈಸೂರು ತಾಲೂಕಿನ ನಾಗನಗಳ್ಳಿಯಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಕಬ್ಬಾಳಮ್ಮ ದೇವಾಲಯದ ಗುಡ್ಡಪ್ಪ ದೇವರಾಜು ಗೂಸ ತಿಂದ ವ್ಯಕ್ತಿ. ಗುಡ್ಡಪ್ಪನ ಅಕ್ರಮ ಸಂಬಂಧ ಕಂಡುಹಿಡಿಯಲು ಆತನ ಪತ್ನಿಯಿಂದಲೇ ಕಾರ್ಯಾಚರಣೆ ನಡೆದಿದೆ. ಗುಡ್ಡಪ್ಪನ ಪತ್ನಿಯ ಕಾರ್ಯಾಚರಣೆಗೆ ಗ್ರಾಮಸ್ಥರು ನೆರವಾಗಿದ್ದರು. ಇದನ್ನೂ ಓದಿ: ಲವ್ವರ್ ಜೊತೆ ಸೆಕ್ಸ್ ನಲ್ಲಿದ್ದಾಗ ರೆಡ್‍ಹ್ಯಾಂಡಾಗಿ ಸಿಕ್ಕಿಬಿದ್ದ ಪತ್ನಿ..!ಗಡ್ಡಪ್ಪನ ಪತ್ನಿಗೆ ಪತಿಯ ಅಕ್ರಮ ಸಂಬಂಧದ ಬಗ್ಗೆ ಅನುಮಾನ ಬಂದಿದೆ. ಅದೇ ರೀತಿ ಪತ್ನಿ ಪ್ರತಿದಿನ ಪತಿಯನ್ನು ಹಿಂಬಾಲಿಸಿದ್ದಾರೆ. ಕೊನೆಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಮನೆಯ ಬಗ್ಗೆ ತಿಳಿದುಕೊಂಡು ಇಂದು ಗ್ರಾಮಸ್ಥರ ಜೊತೆ ಸೇರಿ ರೆಡ್ ಹ್ಯಾಂಡ್ ಆಗಿ ಹಿಡಿದ್ದಾರೆ.ಗ್ರಾಮಸ್ಥರ ದಾಳಿಗೆ ಹೆದರಿ ಗುಡ್ಡಪ್ಪ ಅಟ್ಟದ ಮೇಲೆ ಹತ್ತಿ ಅವಿತು ಕುಳಿತಿದ್ದು, ಅರೆಬೆತ್ತಲೆ ಸ್ಥಿತಿಯಲ್ಲಿ ದೇವರಾಜು ಸಿಕ್ಕಿಬಿದ್ದಿದ್ದಾನೆ. ಕೊನೆಗೆ ಪತ್ನಿಯ ಜೊತೆಗೆ ಗ್ರಾಮಸ್ಥರು ಗುಡ್ಡಪ್ಪನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಮೇಟಗಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


