ಶಿವಮೊಗ್ಗ: ಕರ್ನಾಟಕ ಲೋಕಸಭಾ ಉಪಚುನಾವಣೆಯ ಪ್ರಚಾರ ಭರದಿಂದ ಸಾಗುತ್ತಿದ್ದು, ಜಿಲ್ಲೆಯಲ್ಲಿ ನಟಿ ಪೂಜಾಗಾಂಧಿ ಅವರು ಜೆಡಿಎಸ್ ಪರ ಪ್ರಚಾರ ಮಾಡುತ್ತಿದ್ದಾರೆ. ಪೂಜಾಗಾಂಧಿ ಚುನಾವಣಾ ಪ್ರಚಾರದ ವೇಳೆ ಪೇಚಿಗೆ ಸಿಲುಕಿದ್ದಾರೆ.ಪೂಜಾಗಾಂಧಿ ಎಸ್.ಎನ್. ಮಾರ್ಕೆಟ್ ನಲ್ಲಿ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಪರ ಮತ ಯಾಚನೆ ಮಾಡಲು ಬಂದಿದ್ದರು. ಈ ವೇಳೆ ಸಿಲಿಂಡರ್ ರೇಟ್ ಹೆಚ್ಚಾಗಿದೆ, ಡೀಸೆಲ್, ಪೆಟ್ರೋಲ್ ರೇಟು ಹೆಚ್ಚಾಗಿದೆ. ಗಾಂಧಿ ಬಜಾರ್ ನಲ್ಲಿ ವ್ಯಾಪಾರ ಮಾಡಲು ಅವಕಾಶ ಕೊಡುತ್ತಿಲ್ಲ. ಈಗ ವೋಟ್ ಕೇಳುವುದಕ್ಕೆ ಬಂದಿದ್ದೀರಿ ಎಂದು ವ್ಯಾಪಾರಿ ಮಹಿಳೆ ನಟಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.ನನ್ನೊಬ್ಬಳಿಗೆ ಇಷ್ಟು ಕಷ್ಟವಾಗಿದೆ. ಬೇರೆಯವರಿಗೆ ನನಗಿಂತಲೂ ಹೆಚ್ಚು ಕಷ್ಟ ಆಗುತ್ತಿದೆ. ವ್ಯಾಪಾರ ಮಾಡಬೇಕು, ಮಕ್ಕಳನ್ನು ಸ್ಕೂಲಿಗೆ ಕಳಿಸಬೇಕು. ಇದರ ಜೊತೆಗೆ ಎಲ್ಲಾ ರೇಟು ಹೀಗೆ ಹೆಚ್ಚಾದರೆ ನಾವು ಬದುಕೋದು ಹೇಗೆ ಎಂದು ಮಹಿಳೆ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಈ ಸಂದರ್ಭದಲ್ಲಿ ಮಹಿಳೆಗೆ ಸಮಾಧಾನ ಮಾಡುವಲ್ಲಿ ಪೂಜಾಗಾಂಧಿ ಸೋತಿದ್ದು, ಬಳಿಕ ಸ್ಥಳಿಯ ಮುಖಂಡರು ವ್ಯಾಪಾರಿ ಮಹಿಳೆಗೆ ಸಮಾಧಾನ ಮಾಡಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


