ದಾವಣಗೆರೆ: ದಾವಣಗೆರೆ ಎಂದರೆ ಸಾಕು ಇಲ್ಲಿ ಬೆಣ್ಣೆಯಂತ ಜನರು ಇರುತ್ತಾರೆ ಎನ್ನುವ ಮಾತು ಇದೆ. ಆದರೆ ಅದೇ ಬೆಣ್ಣೆನಗರಿಯಲ್ಲಿ ರಾತ್ರಿಯಾದ್ರೆ ಸಾಕು ಕರಾಳ ಮಾಂಸದಂಧೆಯೊಂದು ಅನಾವರಣವಾಗತ್ತದೆ. ಅದರಲ್ಲೂ ತೃತೀಯ ಲಿಂಗಿಗಳ ಹಾವಳಿ ಇಲ್ಲಿ ಜಾಸ್ತಿಯಾಗಿದ್ದು, ರಾತ್ರಿಯಾದ್ರೆ ಕೂಲಿ ಕಾರ್ಮಿಕರು, ಅಮಾಯಕರು, ಕಾಲೇಜು ವಿದ್ಯಾರ್ಥಿಗಳು ಇವರ ಹಾವಳಿಗೆ ಬಲಿಯಾಗುತ್ತಿದ್ದಾರೆ. ಹೈವೆಯಲ್ಲೇ ಎಗ್ಗಿಲ್ಲದೆ ಹೈಟೆಕ್ ವೇಶ್ಯಾವಾಟಿಕೆ ನಡೆಯುತ್ತಿದೆ.ಜಿಲ್ಲೆಯಲ್ಲಿ ನೂರಕ್ಕೂ ಹೆಚ್ಚು ತೃತೀಯ ಲಿಂಗಿಗಳಿದ್ದು, ಲಾರಿ ಡ್ರೈವರ್, ಹಾಗೂ ಹೈವೇಯಲ್ಲಿ ಹೋಗುತ್ತಿರುವ ದಾರಿಹೋಕರನ್ನು ತಮ್ಮ ಬಲೆಗೆ ಬೀಸಿ ಹಣ ಸುಲಿಗೆ ಮಾಡುತ್ತಿದ್ದಾರೆ. ಇಂತವರು ಮಾಡೋ ಕೆಲಸದಿಂದ ಸಮಾಜದಲ್ಲಿ ತನ್ನದೇ ಆದ ವರ್ಚಸ್ಸು ಬೆಳೆಸಿಕೊಂಡು ನ್ಯಾಯಯುತವಾಗಿ ಜೀವನ ಮಾಡುವ ತೃತೀಯ ಲಿಂಗಿಗಳಿಗೆ ತಲೆ ತಗ್ಗಿಸುವಂತಾಗಿದೆ. ಅಲ್ಲದೇ ಇದು ಜಿಲ್ಲೆಯ ಎಸ್‍ಪಿ ಆರ್.ಚೇತನ್‍ಗೆ ಗೊತ್ತಿದೀಯೋ ಇಲ್ಲವೋ ಅನ್ನೋ ಸಂಶಯ ಕೂಡ ಮೂಡಿದೆ.ಈ ದಂಧೆಗೆ ನೈಟ್ ಬೀಟ್ ಪೊಲೀಸರೇ ರಕ್ಷಣೆ ಕೊಡ್ತಿದ್ದಾರೆ ಎನ್ನುವ ಅನುಮಾನ ಶುರುವಾಗಿದೆ. ಯಾಕಂದ್ರೆ ದಂಧೆ ನಡೆಯುತ್ತಿರುವ 10 ಮೀಟರ್ ದೂರದಲ್ಲಿ ಮೂರು ಜನ ನೈಟ್ ಬೀಟ್ ಪೊಲೀಸರು ಟೀ ಸ್ಟಾಲ್ ಮುಂಭಾಗ ಆರಾಮಾಗಿ ಕುಳಿತು ಹರಟೆ ಹೊಡೆಯುತ್ತಿರುವುದು ಪಬ್ಲಿಕ್ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.ಕಳೆದ ಕೆಲ ತಿಂಗಳ ಹಿಂದೆ ತೃತೀಯ ಲಿಂಗಿಗಳು ಜಿಲ್ಲಾಸ್ಪತ್ರಗೆ ನುಗ್ಗಿ ದಾಂಧಲೆ ನಡೆಸಿದ್ರೂ, ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳದೇ ಸುಮ್ಮನಿದ್ದರು. ಈಗ ಎಗ್ಗಿಲ್ಲದೇ ಮಾಂಸ ದಂಧೆ ನಡೆಸುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿರೋದು ದುರಂತ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


