ಉಡುಪಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅನಾಗರಿಕ. ನಾಗರೀಕತೆ ಇದ್ದವರ ರೀತಿಯಲ್ಲಿ ಅವರು ಮಾತನಾಡುವುದಿಲ್ಲ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ವಾಗ್ದಾಳಿ ನಡೆಸಿದ್ದಾರೆ.ಶಿವಮೊಗ್ಗ ಲೋಕಸಭಾ ಕ್ಷೇತ್ರ ಉಪಚುನಾವಣೆ ಸಂದರ್ಭದಲ್ಲಿ ಕುಂದಾಪುರ ಶಾಸಕ ಹಾಲಾಡಿ ಯಾವಾನೋ ನೋಡೇ ಇಲ್ಲ. ಹಾಲಾಡಿ ಶ್ರೀನಿವಾಸ ಶೆಟ್ಟಿ ನನಗೆ ಗೊತ್ತೇ ಇಲ್ಲ ಎಂದಿದ್ದರು. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿದ್ದು, ಹಾಲಾಡಿ ಶ್ರೀನಿವಾಸ ಶೆಟ್ಟಿ 5 ಬಾರಿ ಶಾಸಕರಾಗಿದ್ದಾರೆ. ಹಾಲಾಡಿಯವರ ಮುಖವನ್ನೇ ನೋಡಿಲ್ಲಾಂತ ಸಿದ್ದರಾಮಯ್ಯ ಹೇಳ್ತಾರೆ. ವಿಧಾನಸೌಧಗೊಳಗೆ ನೀವು ಸದಾ ನಿದ್ದೆ ಮಾಡುತ್ತಿದ್ರಾ? ಯಾರು ಬಂದ್ರೂ ಯಾರು ಹೋದ್ರೂ ನಿಮಗೆ ಗೊತ್ತಾಗಲ್ಲ. ಎಚ್ಚರ ಇದ್ದವರಿಗೆ ಎಲ್ಲವೂ ಗೊತ್ತಾಗುತ್ತದೆ ಅಂತ ಛಾಟಿ ಬೀಸಿದ್ರು.ಸಿದ್ದರಾಮಯ್ಯ ಖಾಯಂ ನಿದ್ರೆಯಲ್ಲೇ ಇದ್ದವರು. ನೀವು ನಿದ್ದೆಯಿಂದ ಎದ್ದಾಗ ಕಾಲ ಮಿಂಚಿ ಹೋಗಿದೆ. ಹಾಲಾಡಿ ಶ್ರೀನಿವಾಸ ಶೆಟ್ಟಿಗೆ ಏಕವಚನ ಬಳಸಿದ್ದೀರಿ. ಸಿದ್ದರಾಮಯ್ಯ ಪದಬಳಕೆ ಅವರ ಅನಾಗರೀಕತೆ ತೋರಿಸುತ್ತದೆ. ಅವರಿಗೆ ನಾಗರೀಕತೆ ಇಲ್ಲ ಎಂದು ಶ್ರೀನಿವಾಸ ಪೂಜಾರಿ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ಯಾವನೋ ಶ್ರೀನಿವಾಸ ಶೆಟ್ಟಿ ಅಂದ ಸಿದ್ದರಾಮಯ್ಯಗೆ ಹಾಲಾಡಿ ತಿರುಗೇಟುಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


