ಕೋಲಾರ: ಕಾಗೆ ಕುಕ್ಕಿದರೆ ಅಪಶಕುನ ಅಂತಾರೆ, ಹಾಗಂತ ಸತ್ತಾಗ ನಾನಾ ಭಕ್ಷ್ಯಗಳನ್ನ ಮಾಡಿ ಮೊದಲಿಗೆ ಕಾಗೆಗಳಿಗೆ ಎಡೆ ಹಾಕುತ್ತೀವಿ. ಇದು ಜನರು ನಂಬಿಕೆಯಾಗಿದೆ. ಆದರೆ ಇಲ್ಲೊಂದು ವಿಚಿತ್ರ ಕಾಗೆ ಪ್ರತಿನಿತ್ಯ ಟೀ ಅಂಗಡಿ ಬಳಿಗೆ ಬಂದು ಟೀ ಕುಡಿದು ಬೋಂಡಾ ಸೇವಿಸಿ ಹೋಗುತ್ತದೆ.ಕೋಲಾರದ ಹಳೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದ ವಾರ್ತಾ ಇಲಾಖೆ ಬಳಿ ಈ ರೀತಿಯ ಕಾಗೆ ಕಂಡು ಬಂದಿದೆ. ಪ್ರಭಾಕರ್ ಟೀ ಅಂಗಡಿ ಬಳಿ ಪ್ರತಿದಿನ ಕಾಗೆ ಬಂದು ಟೀ ಕೊಟ್ಟರೆ ಸೇವಿಸಿ ವಾಪಸ್ ಹೋಗುತ್ತದೆ. ಒಂದು ವೇಳೆ ತಡ ಮಾಡಿದ್ದೇ ಆದಲ್ಲಿ ಕಾವ್ ಕಾವ್ ಎಂದು ಬೇಡಿಕೊಳ್ಳುತ್ತದೆ.ಅಷ್ಟೇ ಅಲ್ಲದೇ ಈ ವಿಚಿತ್ರ ಕಾಗೆ ಬೋಂಡವನ್ನು ಸವಿದು ಹೋಗುತ್ತದೆ. ಸಾಮಾನ್ಯವಾಗಿ ಗಿರಾಕಿಗಳು ಹೆಚ್ಚಾಗಿ ಬರಲಿ ಅಂತ ಸಾಕಷ್ಟು ಜನ ಅಂಗಡಿ ಮಾಲೀಕರು ಕಾಗೆಗಳಿಗೆ ಆಹಾರ ಕೊಡುತ್ತಾರೆ. ಇಲ್ಲಿ ಮಾತ್ರ ಕಾಗೆ ಅದಾಗೆ ಬಂದು ಟೀ ಮತ್ತು ಬೊಂಡಾ ಕೊಟ್ಟರೆ ಸೇವಿಸಿ ಹೊರಡುತ್ತದೆ. ಕಾಗೆ ಈ ರೀತಿ ಬಂದು ಟೀ ಕುಡಿದು ಹೋಗುತ್ತಿರುವುದಕ್ಕೆ ಹಿಂದಿನ ಜನ್ಮದಲ್ಲಿ ಬೊಂಡ ಟೀ-ಕಾಫಿ ಕುಡಿಯುತ್ತಿದ್ದ ಯಾವುದಾದರು ವ್ಯಕ್ತಿನಾ ಎಂದು ಸುತ್ತಮುತ್ತಲಿನ ಜನರು ಮಾತನಾಡಿಕೊಳ್ಳುತ್ತಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


