ಚಾಮರಾಜನಗರ: ಕುಟುಂಬದಲ್ಲಿ ಪತಿ- ಪತ್ನಿ ನಡುವೆ ಆರಂಭವಾದ ಸಣ್ಣ ಜಗಳವೊಂದು 2ನೇ ಪತ್ನಿಯ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜಿಲ್ಲೆಯ ಯಳಂದೂರು ತಾಲೂಕಿನ ಕಂದಹಳ್ಳಿ ಗ್ರಾಮದಲ್ಲಿ ನಡೆದಿದೆ.ಗ್ರಾಮದ ಶೇಖರ್ ಪತ್ನಿಗೆ ಚಾಕು ಇರಿದ ಪತಿ. ಭಾಗ್ಯ ಕೊಲೆಯಾದ ಮಹಿಳೆಯಾಗಿದ್ದು, ಇಬ್ಬರ ನಡುವೆ ಪ್ರತಿನಿತ್ಯ ಸಣ್ಣ ಪುಟ್ಟ ವಿಚಾರಗಳಿಗೆ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದ್ದು, ಇದರಿಂದ ಬೇಸತ್ತ ಶೇಖರ್ ಪತ್ನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.ಅಂದಹಾಗೇ 4 ವರ್ಷಗಳ ಹಿಂದೆ ಶೇಖರ್ ಹಾಗೂ ಭಾಗ್ಯ ವಿವಾಹ ನಡೆದಿದ್ದು, ಇಷ್ಟು ವರ್ಷಗಳಾದರು ದಂಪತಿಗೆ ಮಕ್ಕಳು ಜನಿಸಿರಲಿಲ್ಲ. ಮೃತ ಭಾಗ್ಯರನ್ನು ಮದುವೆಯಾಗುವ ಮುನ್ನವೇ ಶೇಖರ್ ಗೆ ಮತ್ತೊಂದು ಮದುವೆಯಾಗಿತ್ತು. ಅಲ್ಲದೇ ಇಬ್ಬರಿಗೂ 2 ಮಕ್ಕಳು ಕೂಡ ಜನಿಸಿದ್ದರು. ಶೇಖರ್ ಇಬ್ಬರು ಪತ್ನಿಯರನ್ನು ಪ್ರತ್ಯೇಕ ಮನೆಯಲ್ಲಿಟ್ಟು ನೋಡಿಕೊಳ್ಳುತ್ತಿದ್ದನು.2ನೇ ಪತ್ನಿ ಭಾಗ್ಯಗಳೊಂದಿಗೆ ಶೇಖರ್ ಸಣ್ಣ ಪುಟ್ಟ ವಿಚಾರಗಳಿಗೂ ಜಗಳ ಮಾಡುತ್ತಿದ್ದನು. ಘಟನೆ ನಡೆದ ವೇಳೆಯೂ ಇಬ್ಬರ ನಡುವೆ ಜಗಳವಾಗಿದ್ದು, ಈ ವೇಳೆ ಚಾಕುವಿನಿಂದ ಪತ್ನಿಗೆ ಇರಿದಿದ್ದಾನೆ. ಪತ್ನಿ ಹಲ್ಲೆಯಿಂದ ಅಘಾತಗೊಂಡ ಪತ್ನಿ ರಕ್ಷಣೆಗೆ ಮನೆಯಿಂದ ಹೊರ ಬಂದು ರಸ್ತೆ ಮಧ್ಯದಲ್ಲೇ ಕುಸಿದು ಬಿದ್ದಿದ್ದಾಳೆ. ಇದನ್ನು ಕಂಡ ಶೇಖರ್ ಸ್ಥಳದಿಂದ ಪರಾರಿಯಾಗಿದ್ದಾನೆ.ಘಟನೆ ಕುರಿತು ಗ್ರಾಮಸ್ಥರಿಂದ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಆರೋಪಿ ಶೇಖರ್ ವಿರುದ್ಧ ಯಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


