ಕಾರವಾರ: ಗೋವಾ ಗಡಿಯ ಮಾಜಾಳಿಯಲ್ಲಿ ಕಾರವಾರದಿಂದ ಗೋವಾಕ್ಕೆ ತೆರಳುತ್ತಿದ್ದ ಮೀನು ಲಾರಿಯನ್ನು ಗೋವಾ ಪೊಲೀಸರು ನಿರ್ಬಂಧಿಸಿದ್ದಾರೆ.ಶುಕ್ರವಾರ ಹಾಗೂ ಇಂದು ಗೋವಾಕ್ಕೆ ತೆರಳಲು ಆಗಮಿಸಿದ್ದ 50ಕ್ಕೂ ಹೆಚ್ಚು ಮೀನಿನ ಲಾರಿಗೆ ತಡೆ ಹಿಡಿಯಲಾಗಿದೆ. ನಿನ್ನೆ ತಡರಾತ್ರಿ ನಿರ್ಬಂಧಿಸಿದ ಹಿನ್ನೆಲೆಯಲ್ಲಿ ಗೋವಾ ಪೊಲೀಸರೊಂದಿಗೆ ಕಾರವಾರದ ಮೀನುಗಾರರೊಂದಿಗೆ ಮಾತಿನ ಚಕಮಕಿ ನಡೆದಿದೆ.ರಾಸಾಯನಿಕ ಸಿಂಪಡಣೆ ಹಿನ್ನೆಲೆಯಲ್ಲಿ ಗೋವಾ ಸರ್ಕಾರ ಜುಲೈ ತಿಂಗಳಿನಲ್ಲಿ ಹೊರ ರಾಜ್ಯದ ಮೀನುಗಳಿಗೆ ನಿರ್ಬಂಧ ಹೇರಿತ್ತು. ಆದರೆ ಗೋವಾ ಸರ್ಕಾರ ಈಗಾಗಲೇ ನಿರ್ಬಂಧವನ್ನು ಹಿಂಪಡೆದಿದ್ದರೂ ಕರ್ನಾಟಕದ ಮೀನಿನ ಲಾರಿಗಳನ್ನೇ ಗುರಿಯಾಗಿಸಿಕೊಂಡು ತಡೆಯಲಾಗುತ್ತಿದೆ. ಇದರಿಂದಾಗಿ ಲಕ್ಷಾಂತರ ಮೌಲ್ಯದ ಮೀನುಗಳು ಕೊಳೆತು ಹಾಳಾಗುತ್ತಿದ್ದು, ತುಂಬಲಾರದ ನಷ್ಟವಾಗಿದೆ ಎಂದು ಮೀನುಗಾರರು ಸಂಕಷ್ಟವನ್ನು ಹೇಳಿ ದುಃಖ ತೋಡಿಕೊಂಡಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


