ಮಂಡ್ಯ: ದೇವಾಲಯದ ಪೂಜೆ ಮಾಡಲು ಪೂಜಾರಿಯನ್ನು ದೇವಾಲಯದ ಬಸವನೇ ನೇಮಿಸಿದ ಅಚ್ಚರಿ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ರಾಗಿ ಬೊಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ.ಮದ್ದೂರು ತಾಲ್ಲೂಕಿನ ಚಿಕ್ಕರಸಿನಕೆರೆ ಗ್ರಾಮದ ಕಾಲ ಭೈರವೇಶ್ವರ ಸ್ವಾಮಿ ದೇವಾಲಯದ ಬಸವನನ್ನು ರಾಗಿ ಬೊಮ್ಮನಹಳ್ಳಿ ಗ್ರಾಮಕ್ಕೆ ವಿಶೇಷ ಪೂಜೆಗೆಂದು ಕರೆತರಲಾಗಿತ್ತು. ಈ ವೇಳೆ ಗ್ರಾಮಸ್ಥದ ಮಂಚಮ್ಮ ದೇವಸ್ಥಾನದ ನಿತ್ಯ ಪೂಜೆಗೆ ಅರ್ಹ ವ್ಯಕ್ತಿಯನ್ನು ನೇಮಿಸುವಂತೆ ಬಸವನಲ್ಲಿ ಮನವಿ ಮಾಡಿದ್ದು, ಗ್ರಾಮಸ್ಥರ ಮನವಿ ಮೇರೆಗೆ ಬಸವ ಊರಿನ ಯುವಕನನ್ನು ಪೂಜಾರಿಯಾಗಿ ನೇಮಕ ಮಾಡಿದೆ.ಗ್ರಾಮಸ್ಥರು ಮನವಿ ಮಾಡುತ್ತಿದಂತೆ ಬಸವ ಗುಂಪಿನಲ್ಲಿದ್ದ ರವಿಕುಮಾರ್ ಯುವಕನ ಬಳಿ ತೆರಳಿ ಆತನನ್ನು ಕೊಂಬಿನಿಂದ ತಳ್ಳಿ ಆಯ್ಕೆ ಮಾಡಿದೆ. ಅಲ್ಲದೇ ದೇವಾಲಯದ ಪಕ್ಕದಲ್ಲಿ ಇರುವ ಕೆರೆಯಲ್ಲಿ ಆತನನ್ನು ಮುಳುಗಿಸಿ ಬಳಿಕ ಮೇಲಕ್ಕೆ ಕರೆತಂದಿದೆ. ಸಂಪೂರ್ಣ ಘಟನೆಯನ್ನು ಕಂಡ ಭಕ್ತರು ಅಚ್ಚರಿಗೊಂಡಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


