ಕೊಪ್ಪಳ: ಮಂಚಕ್ಕೆ ಹಾಜರ್ ಮದುವೆಗೆ ಚಕ್ಕರ್ ಎನ್ನುತ್ತಿದ್ದ ಭೂಪನೊಬ್ಬ ಇದೀಗ ಪೊಲೀಸರ ಅತಿಥಿ ಆಗಿದ್ದಾನೆ. ಈ ಘಟನೆ ಕೊಪ್ಪಳದ ಗಂಗಾವತಿ ತಾಲೂಕಿನ ಹಗೆದಾಳ್ ಗ್ರಾಮದಲ್ಲಿ ನಡೆದಿದೆ.ಹಗೆದಾಳ್ ಗ್ರಾಮದ ನಿವಾಸಿಯಾದ ಚಾಂದ್ ಪಾಷಾ ಮದುವೆಯಾಗುದಾಗಿ ಯುವತಿಗೆ ಮೋಸ ಮಾಡಿದ್ದಾನೆ. ಈತನಿಗೆ ಈಗಾಗಲೇ ಮದುವೆಯಾಗಿ ಹೆಂಡತಿ, ಮಕ್ಕಳು ಇದ್ದರೂ ಈತನ ಚಪಲಕ್ಕೆ ಹರೆಯದ ಹುಡುಗಿಯರು ಬಲಿ ಆಗುತ್ತಿದ್ದರು. ಇದೀಗ ಅದೇ ಗ್ರಾಮದ ಪುಷ್ಪ(ಹೆಸರು ಬದಲಾಯಿಸಲಾಗಿದೆ) ಎಂಬ ಯುವತಿಯನ್ನು ಬಲೆಗೆ ಹಾಕಿಕೊಂಡು ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾನೆ.ಚಾಂದ್ ಪಾಷಾ ಅವರ ಹೊಲಕ್ಕೆ ಕೂಲಿ ಕೆಲಸಕ್ಕೆಂದು ಹೋಗುತ್ತಿದ್ದ ಪುಷ್ಪ ಆತನ ಪ್ರೀತಿಯ ಬಲೆಗೆ ಬಿದ್ದಿದ್ದಾರೆ. ನಂತರ ನಿನ್ನೆ ಮದುವೆ ಆಗುತ್ತೀನಿ ಎಂದು ನಂಬಿಸಿ ಆಕೆಯ ಜೊತೆ ದೈಹಿಕ ಸಂಪರ್ಕವನ್ನು ಬೆಳೆಸಿದ್ದು, ಈಗ ಕೈಗೆ ಒಂದು ಮುದ್ದಾದ ಮಗು ನೀಡಿದ್ದಾನೆ. ಮದುವೆ ಮಾಡಿಕೋ ಎಂದು ಕೇಳಿದರೆ ನೀನು ಬೇರೆ ಜಾತಿಯಿಂದ ಬಂದವಳು ನಿನ್ನನ್ನು ಮದುವೆ ಆಗುವುದಕ್ಕೆ ಆಗಲ್ಲ ಎಂದು ಹೇಳಿದ್ದಾನೆ.ಯುವತಿ ಚಾಂದ್ ಪಾಷಾ ಮನೆಯವರಿಗೆ ತನ್ನ ಅಳಲನ್ನು ಹೇಳಿಕೊಂಡರು ಅವರು ಸಹ ಇದೆ ರೀತಿ ಉತ್ತರ ನೀಡಿದ್ದಾರೆ. ಕೊನೆಗೆ ದಿಕ್ಕು ತೋಚದೆ ಯುವತಿ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆಗೆ ಕುಳಿತಿದ್ದಾರೆ. ನನಗೆ ನ್ಯಾಯ ಕೊಡಿಸಿ ಎಂದು ಅಂಗಲಾಚಿ ಬೇಡಿಕೊಳ್ಳುತ್ತಿದ್ದಾರೆ.ಈ ಕಡೆ ಮೋಸ ಮಾಡಿದ ಚಾಂದ್ ಪಾಷಾ ಮಾತ್ರ, ನಂದೇನೂ ತಪ್ಪಿಲ್ಲಾ ಅವಳೇ ಕರೆದಳು ಅದಕ್ಕೆ ಹೋದೆ ಮಗು ಆದರೆ ನಾನೇನ್ ಮಾಡಲಿ ಅಂತಿದ್ದಾನೆ. ಕೊನೆಗೆ ಚಾಂದ್ ಪಾಷಾ ಸೇರಿ ಮನೆಯ ಮೂರು ಜನರ ವಿರುದ್ಧ ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ನೊಂದ ಯುವತಿ ದಾಖಲಿಸಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


