ಕೊಪ್ಪಳ: ತಾಲೂಕು ಹಿರಿಯ ಆರೋಗ್ಯ ಸಹಾಯ ಅಧಿಕಾರಿಯೊಬ್ಬ ಸರ್ವಾಧಿಕಾರಿಯಂತೆ ವರ್ತಿಸಿ ಖಾಯಂ ನೌಕರನೊರ್ವನ ಮೇಲೆ ಹಲ್ಲೆ ನಡೆಸಿರುವ ಘಟನೆ ಕೊಪ್ಪಳದ ಗಂಗಾವತಿಯಲ್ಲಿ ನಡೆದಿದೆ.ಗಂಗಾವತಿ ತಾಲೂಕಿನ ಟಿಎಚ್‍ಓ ಕಚೇರಿಯಲ್ಲಿ ಸಹಾಯಕ ಹಿರಿಯ ಅಧಿಕಾರಿಯಾದ ವಿಜಯ್ ಪ್ರಸಾದ್ ನೌಕರನಾದ ಶಿವಶಂಕರ್ ಮೇಲೆ ಹಲ್ಲೆ ನಡೆಸಿದ್ದಾರೆ. ನೌಕರನ ಮೇಲೆ ಹಲ್ಲೆ ನಡೆಸಿರುವ ದೃಶ್ಯಾವಳಿಗಳು ಕಚೇರಿಯ ಒಳಗಡೆ ಇರುವ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಈ ಘಟನೆ ಅಕ್ಟೋಬರ್ 12 ರಂದು ನಡೆದಿದ್ದು ಇದೀಗ ಬೆಳಕಿಗೆ ಬಂದಿದೆ.ಶಿವಶಂಕರ್ ಸಮುದಾಯ ಆರೋಗ್ಯ ಕೇಂದ್ರದ ಕನಕಗಿರಿಯ ಖಾಯಂ ನೌಕರನಾಗಿದ್ದು, ಕಚೇರಿ ಕೆಲಸದ ನಿಮಿತ್ತ ತಾಲೂಕು ಕೇಂದ್ರಕ್ಕೆ ಆಗಮಿಸಿದ್ದಾರೆ. ಈ ವೇಳೆ ಅಲ್ಲಿನ ಸಹಾಯಕ ಹಿರಿಯ ಅಧಿಕಾರಿಯಾದ ವಿಜಯ್ ಪ್ರಸಾದ್ ಮತ್ತು ಶಿವಶಂಕರ್ ನಡುವೆ ಮಾತಿನ ಚಕಮಕಿ ನಡೆದಿದೆ. ನಂತರ ವಿಜಯ್ ಪ್ರಸಾದ್ ಒಮ್ಮಿಂದೊಮ್ಮಲೆ ಶಿವಶಂಕರ್ ಮೇಲೆ ಚಪ್ಪಲಿನಿಂದ ಹೊಡೆಯಲು ಮುಂದಾಗಿದ್ದಾರೆ.ವಿಜಯ ಪ್ರಸಾದ್ ಮಾಡಿರುವ ಹಲ್ಲೆ ಸಿಸಿಟಿವಿಯಲ್ಲಿ ಸೆರೆಯಾಗಿದೆ ಅದನ್ನ ಗಮನಿಸಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಗಂಗಾವತಿ ನಗರ ಠಾಣೆಯಲ್ಲಿ ಶಿವಶಂಕರ್ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


