ಶಿವಮೊಗ್ಗ: ಈ ರಾಜ್ಯ, ದೇಶವನ್ನು ಒಳ್ಳೆಯ ದಿಕ್ಕಿಗೆ ತೆಗೆದುಕೊಂಡು ಹೋಗಲು ಈ ಚುನಾವಣೆ ಬಂದಿದ್ದು, ಈ ಸಮಯದಲ್ಲಿ ಉಪ ಚುನಾವಣೆ ಬಂದಿರುವುದು ದೈವ ಇಚ್ಛೆ ಎಂದು ಮಧು ಬಂಗಾರಪ್ಪ ಹೇಳಿದ್ದಾರೆ.ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪಚುನಾವಣಾ ಕಣದಲ್ಲಿ ಮೈತ್ರಿ ಕೂಟದ ಅಭ್ಯರ್ಥಿಯಾಗಿರುವ ಮಧು ಬಂಗಾರಪ್ಪ ಅವರು ಇಂದು ಸಾಗರ ತಾಲೂಕಿನ ಹಲವೆಡೆ ಪ್ರಚಾರ ಕೈಗೊಂಡರು. ಈ ವೇಳೆ ಮಾತನಾಡಿ, ಕಳದ ಚುನಾವಣೆಯಲ್ಲಿ ಸೊರಬ ಕ್ಷೇತ್ರದಲ್ಲಿ ಸೋತಿದ್ದರಿಂದ ರಾಜ್ಯ ಹಾಗೂ ದೇಶಕ್ಕೆ ಒಳಿತಾಗಲಿದೆ ಅನ್ನಿಸುತ್ತಿದೆ. ಗೆದ್ದಿದ್ದರೆ ನಾನು ಸಚಿವನಾಗಿ ಇಲ್ಲಿಗೆ ಬರುತ್ತಿದ್ದೆ. ಸಿಎಂ ಕುಮಾರಸ್ವಾಮಿ ನಂತರದ ಸ್ಥಾನದಲ್ಲಿ ಇದ್ದವನು ನಾನು ಎಂದು ಹೇಳಿದರು.ಸೊರಬದಲ್ಲಿ ಗೆದ್ದಿದ್ದರೆ ಒಂದೇ ಕ್ಷೇತ್ರದಲ್ಲಿ ಕೆಲಸ ಮಾಡಬೇಕಿತ್ತು. ಈಗ ಎಂಟೂ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಅವಕಾಶ ದೊರಕಿದೆ. ಬಿಜೆಪಿಗೆ 9 ವರ್ಷ ಅಧಿಕಾರವನ್ನ ಕ್ಷೇತ್ರದಲ್ಲಿ ನೀಡಿದ್ದೀರಿ. ಈಗ ನನಗೆ ಮೊದಲ ಅವಕಾಶ ನೀಡಿ. ಕಾಲಾವಕಾಶ ಕಡಿಮೆ ಇದ್ದರೂ ಉತ್ತಮ ಸೇವೆ ಮಾಡುತ್ತೇನೆ. ಸಿಎಂ ಕುಮಾರಸ್ವಾಮಿ ನನಗೆ ಬೆಂಬಲ ನೀಡಿದ್ದಾರೆ. ನೀವು ನೀಡುವ ಕರ್ತವ್ಯವನ್ನು ಉತ್ತಮವಾಗಿ ನಿರ್ವಹಿಸುತ್ತೇನೆ ಎಂದು ಆಶ್ವಾಸನೆ ನೀಡಿದರು.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


