ಚಿಕ್ಕೋಡಿ: ಚರಂಡಿಯಲ್ಲಿ ಬಿದ್ದು 2ನೇ ತರಗತಿ ಬಾಲಕನೋರ್ವ ಸಾವನ್ನಪ್ಪಿರುವ ಧಾರುಣ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಬಡಕುಂದ್ರಿ ಗ್ರಾಮದಲ್ಲಿ ನಡೆದಿದೆ.ಬಡಕುಂದ್ರಿ ಗ್ರಾಮದ ರಂಜಿತ್ ಆನಂದ್ ಬಡಿಗೇರ 8 ಚರಂಡಿಯಲ್ಲಿ ಬಿದ್ದು ಸಾವನ್ನಪ್ಪಿರುವ ಬಾಲಕ. ಮಂಗಳವಾರ ಶಾಲೆಗೆ ತೆರಳಿದ್ದ ರಂಜಿತ್ ಮಧ್ಯಾಹ್ನ ಊಟದ ಸಮಯದಲ್ಲಿ ಹೊಟ್ಟೆ ನೋವು ಬಂದಿದೆ ಮನೆಗೆ ಹೋಗುತ್ತೇನೆ ಎಂದು ಶಿಕ್ಷಕರಿಗೆ ತಿಳಿಸಿ ಮನೆಗೆ ತೆರಳಿದ್ದಾನೆ.ಮನೆಗೆ ಹೋಗುವಾಗ ತಲೆ ತಿರುಗಿ ಚರಂಡಿಯಲ್ಲಿ ಬಿದ್ದು ಎದ್ದೇಳಲು ಆಗದೆ ಬಾಲಕ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಬಾಲಕ ಮನೆಗೆ ಬಾರದ ಕಾರಣ ಮನೆಯವರು ಎಲ್ಲ ಕಡೆ ಹುಡುಕಿದರೂ ರಂಜಿತ್ ಸಿಕ್ಕಿರಲಿಲ್ಲ. ಮಗನಿಗಾಗಿ ಮನೆ ಮನೆಗಳಿಗೆ ಹೋಗಿ ಹುಡುಕಾಟ ನಡೆಸುವ ಬದಲು ಚರಂಡಿಯಲ್ಲಿ ಹುಡುಕಿದ್ದರೆ ಮಗ ಬದಕುಳಿಯುತ್ತಿದ್ದ ಎಂದು ಬಾಲಕನ ತಾಯಿ ರೋಧಿಸುತ್ತಿದ್ದಾಳೆ.ಸದ್ಯ ಸ್ಥಳಕ್ಕೆ ಯಮಕನಮರಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


