ಬಳ್ಳಾರಿ: ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿ ನಾಯಕರು ದಿನಕ್ಕೊಂದು ಸವಾಲು ಪ್ರತಿ ಸವಾಲು ಹಾಕುತ್ತಿದ್ದು, ಶಾಸಕ ಶ್ರೀರಾಮುಲುಗೆ ಮತ್ತೆ ಸಚಿವ ಶಿವಕುಮಾರ್ ಅವರು ಟಕ್ಕರ್ ಕೊಟ್ಟಿದ್ದಾರೆ.ಮಂಗಳವಾರ ಮಾಜಿ ಸಿಎಂ ಸಿದ್ದರಾಮಯ್ಯ ಬಳ್ಳಾರಿಗೆ ಶಾಸಕ ಶ್ರೀರಾಮುಲ್ ಅವರ ಕೊಡುಗೆ ಎನೂ ಅಂತಾ ಪ್ರಶ್ನೆ ಮಾಡಿದ್ದರು. ಸಿದ್ದರಾಮಯ್ಯ ಅವರ ಆರೋಪಕ್ಕೆ ಇಂದು ತಿರುಗೇಟು ನೀಡಿದ ಶಾಸಕ ಶ್ರೀರಾಮುಲು, ಬಳ್ಳಾರಿ ಜಿಲ್ಲೆಗೆ ಬಿಜೆಪಿ ಅತಿ ಹೆಚ್ಚು ಅನುದಾನ ನೀಡಿದೆ. ಕಾಂಗ್ರೆಸ್ ನಾಯಕರು ಶ್ವೇತ ಪತ್ರ ಹೊರಡಿಸಲಿ. ಅವರು ಹೆಚ್ಚು ಅನುದಾನ ನೀಡಿದರೆ ನಾನು ರಾಜಕೀಯ ನಿವೃತ್ತಿ ಪಡೆಯುವೆ ಅಂತ ಸವಾಲು ಎಸೆದಿದ್ದರು.ಶಾಸಕ ಶ್ರೀರಾಮುಲು ಸವಾಲಿಗೆ ಪ್ರತಿ ಸವಾಲು ಹಾಕಿದ ಸಚಿವ ಡಿಕೆ ಶಿವಕುಮಾರ್, ಶಾಸಕ ಶ್ರೀರಾಮುಲು ಅವರು ಬಹಿರಂಗ ಚರ್ಚೆಗೆ ಸಿದ್ದವೇ? ಅವರೇ ದಿನಾಂಕ ನಿಗದಿ ಮಾಡಲಿ ಅಂತ ತಿರುಗೇಟು ನೀಡಿದ್ದಾರೆ. ರಾಜ್ಯದಲ್ಲಿ ಬಳ್ಳಾರಿಗೆ ಇದ್ದಂತಹ ಗೌರವ, ಜನರಿಗೆ ಇದ್ದ ಉದ್ಯೋಗ ಇದೆಲ್ಲವನ್ನು ಖಾಲಿ ಮಾಡಿ ಈಗ ಬಳ್ಳಾರಿಯನ್ನು ಕಳಂಕಕ್ಕೀಡು ಮಾಡಿದ್ದಾರೆ. ಅವರಿಗೆ ಬಳ್ಳಾರಿಯ ಮೇಲೆ ಅಷ್ಟು ಪ್ರೀತಿ ಇದ್ದರೇ, ಇಲ್ಲೆ ಚುನಾವಣೆಗೆ ನಿಂತುಕೊಳ್ಳಬೇಕಿತ್ತು. ಇಲ್ಲೇ ಕಷ್ಟ ಪಟ್ಟು ಎಂಎಲ್‍ಎ ಹಾಕಬೇಕಿತ್ತು. ಯಾಕೆ ಇಲ್ಲಿಂದ ಹೋದರು ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು.ಶ್ರೀರಾಮುಲು ಅಣ್ಣಾ, ಶ್ರೀರಾಮುಲು ಅಣ್ಣಾ ಬಳ್ಳಾರಿಗೆ ಬೇಕಾದಷ್ಟು ಅನುದಾನ ತಂದಿದ್ದಾರೆ. ಇದರಿಂದ ಬಹಳ ಸಂತೋಷವಾಗಿದೆ. ಶ್ರೀರಾಮುಲು ಅಣ್ಣನ ಮೇಲೆ ನನಗೆ ಬಹಳ ಪ್ರೀತಿ, ಐ ಲವ್ ಶ್ರೀರಾಮುಲು. ಯಾಕೆಂದರೆ ಅವರು ಶ್ರೀರಾಮುಲು ಕಟ್ಟಾ ಕಾಂಗ್ರೆಸಿಗರು, ನಮ್ಮ ಕಾರ್ಪೋರೇಟರ್ ಆಗಿದ್ದವರು ನನಗೆ ಗೊತ್ತಿದೆ ಎಂದು ಡಿಕೆಶಿ ಹೇಳಿ ಶ್ರೀರಾಮುಲು ಕಾಲೆಳೆದಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


