ರಾಯಚೂರು: ರಾಯಚೂರಿನ ಲಿಂಗಸೂಗೂರಿನ ಉಪವಲಯ ಅರಣ್ಯಾಧಿಕಾರಿಯೊಬ್ಬ ಮನೆಯವರ ಮಾತು ಕೇಳಿ ಪತ್ನಿ ಮೇಲೆ ಡೀಸೆಲ್ ಸುರಿದು ಕೊಲೆ ಮಾಡಲು ಯತ್ನಿಸಿದ ಘಟನೆ ನಡೆದಿದೆ.ಅಧಿಕಾರಿ ಸಂಗಮೇಶ್ ಪಾಟೀಲ್ ಲಿಂಗಸುಗೂರಿನ ತನ್ನ ಮನೆಯಲ್ಲಿ ಪತ್ನಿಯ ಮೇಲೆಯೇ ಡೀಸೆಲ್ ಸುರಿದು ಕೊಲೆ ಮಾಡಲು ಯತ್ನಿಸಿದ್ದಾನೆ. 11 ತಿಂಗಳ ಹಿಂದೆ ಅಧಿಕಾರಿ ಮತ್ತು ಶ್ವೇತಾ ಇಬ್ಬರು ಮದುವೆಯಾಗಿದ್ದರು. ಮದುವೆಯಾಗಿದ್ದಾಗಿನಿಂದ ಅಧಿಕಾರಿ ಪತ್ನಿ ಶ್ವೇತಾ ಪಾಟೀಲ್ ಜೊತೆ ಸಂಸಾರ ಮಾಡದೇ ಪ್ರತಿನಿತ್ಯ ಜಗಳವಾಡುತ್ತಿದ್ದನು. ಕೊನೆಗೆ ಒಂದು ದಿನ ಡೀಸೆಲ್ ಸುರಿದು ಕೊಲೆ ಯತ್ನಿಸಿದ್ದಾನೆ ಅಂತ ಪತ್ನಿ ಶ್ವೇತಾ ಲಿಂಗಸಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಸದ್ಯಕ್ಕೆ ಶ್ವೇತಾ ಪಾಟೀಲ್ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದು, ಲಿಂಗಸುಗೂರು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


