ಮಂಡ್ಯ: ಇಲ್ಲಿನ ಲೋಕಸಭೆ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಡಾಕ್ಟರ್ ಸಿದ್ದರಾಮಯ್ಯ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರನ್ನು ಸ್ಮರಿಸಿದ್ದು ಅವರ ನಾಮಬಲದಿಂದ ಒಂದಷ್ಟು ಮತ ಬರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರು, ನನ್ನ ಹೆಸರು ಒಂದೇ ಆಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ದೊಡ್ಡವರು. ಒಂದೇ ಹೆಸರು ಇರೋದ್ರಿಂದ ಅವರೇ ಅಭ್ಯರ್ಥಿ ಎಂಬಂತಾಗಿದೆ. ಅವರ ನಾಮಬಲದಿಂದಲೂ ಒಂದಷ್ಟು ಮತ ಬರಲಿ. ಅವರ ನಾಮಬಲ ನಮಗೆ ಅನುಕೂಲ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.ಇಂದು ಬೆಳ್ಳಂ ಬೆಳಗ್ಗೆ ಪಾರ್ಕ್‍ಗಳಿಗೆ ಹೋಗಿ ವಾಕಿಂಗ್ ಮಾಡುತ್ತಿದ್ದವರ ಜೊತೆ ಮತಯಾಚನೆ ಮಾಡುತ್ತಿದ್ದ ಡಾಕ್ಟರ್ ಸಿದ್ದರಾಮಯ್ಯ ಅವರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿನ ಅನುಭವವಾಯ್ತಂತೆ. ವಾಕ್ ಮಾಡುತ್ತಿದ್ದವರು ಸಿದ್ದರಾಮಯ್ಯ ಎಂಬ ಹೆಸರು ಕೇಳಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಬಂದಿದ್ದಾರೆ ಎಂದು ಹುಡುಕುತ್ತಿದ್ದರಂತೆ. ಆಗ ಅವರಿಗೆ ನಾನೇ ಡಾಕ್ಟರ್ ಸಿದ್ದರಾಮಯ್ಯ, ಮಂಡ್ಯ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂದು ಹೇಳುತ್ತಿದ್ದೆ ಅಂತ ಸ್ಪಷ್ಟನೆ ನೀಡಿದೆ ಅಂದ್ರು.ಇದೇ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸುವುದರ ಬಗ್ಗೆ ಮಾತನಾಡಿದ ಅವರು, ಅದರಿಂದ ಎಫೆಕ್ಟೇನೂ ಆಗಲ್ಲ. ಮಂಡ್ಯದಲ್ಲಿ ಎಚ್ಚೆತ್ತ ಮತದಾರರಿದ್ದಾರೆ. ನಾವು ಕೂಡ ಉತ್ಸಾಹದಿಂದ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದ್ರು.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


