ಬಳ್ಳಾರಿ: ಕಾಂಗ್ರೆಸ್ ಸಭೆಯಲ್ಲಿ ಮೈಕ್ ಗಾಗಿ ಕಾಂಗ್ರೆಸ್ ಕಾರ್ಯಕರ್ತರೇ ಕಿತ್ತಾಡಿಕೊಂಡ ಘಟನೆ ನಗರದಲ್ಲಿ ನಡೆದಿದೆ.ಕೃಷಿ ಸಚಿವ ಕೃಷ್ಣೇ ಭೈರೇಗೌಡ ಅಧ್ಯಕ್ಷತೆಯಲ್ಲಿಂದು ನಗರದ ಖಾಸಗಿ ಹೋಟೆಲ್‍ನಲ್ಲಿ ಕಾಂಗ್ರೆಸ್ ಮುಖಂಡರ ಸಭೆ ಹಮ್ಮಿಕೊಳ್ಳಲಾಗಿತ್ತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಕೃಷ್ಣೇ ಭೈರೇಗೌಡ ಹಾಗೂ ಗ್ರಾಮೀಣ ಶಾಸಕ ನಾಗೇಂದ್ರ ಮಾತನಾಡುವುದು ಮುಗಿಯುತ್ತಿದ್ದಂತೆ, ಕೈ ಕಾರ್ಯಕರ್ತರು ಹಾಗೂ ಮುಖಂಡರ ನಡುವೆ ಮೈಕ್‍ಗಾಗಿ ಕಿತ್ತಾಟ ಏರ್ಪಟ್ಟಿತ್ತು.ಮೊದಲು ನಾನು ಮಾತನಾಡುತ್ತೀನಿ, ನನಗೂ ಅವಕಾಶ ಕೊಡಿ ಎಂದು ಒಬ್ಬರು ಮೈಕ್ ಹಿಡಿದುಕೊಂಡಿದ್ದಾರೆ. ಇದೇ ವೇಳೆ ಮತ್ತೊಬ್ಬರೂ ನಾನು ಮೊದಲು ಮಾತನಾಡಬೇಕು ಅಂತ ಇಬ್ಬರೂ ಪರಸ್ಪರ ಮೈಕ್ ಗಾಗಿ ಕಿತ್ತಾಡಿಕೊಂಡಿದ್ದಾರೆ. ಈ ಸಂಬಂಧ ವೇದಿಕೆಯಲ್ಲಿದ್ದ ಸಚಿವರು ಹಾಗೂ ಶಾಸಕರು ಎಷ್ಟೇ ಹೇಳಿದರೂ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಕಿತ್ತಾಟ ಮುಂದುವರಿದಿತ್ತು.ಇದೀಗ ಸಭೆಯಲ್ಲಿ ಕಾರ್ಯಕರ್ತರೇ ಕಿತ್ತಾಡಿಕೊಂಡಿದ್ದಕ್ಕೆ ಸಚಿವರು ಸೇರಿದಂತೆ ಇತರೆ ಮುಖಂಡರು ತಲೆ ತಗ್ಗಿಸುವಂತಾಗಿತ್ತು.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


