ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸದ್ಯಕ್ಕೆ ಮೈಸೂರಿನ ತಮ್ಮ ಮನೆಯಲ್ಲಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ. ಆದರೆ ಈಗ ಅವರ ಮನೆಗೆ ವಿಶೇಷ ಅತಿಥಿಯೊಬ್ಬರು ಆಗಮಿಸಿದ್ದಾರೆ.ದರ್ಶನ್ ಮನೆಗೆ ವಿಶೇಷ ಅತಿಥಿಯಾಗಿ ಬಂದಿರುವುದು ಮುದ್ದಾದ ಗಿಳಿ. ದರ್ಶನ್, ಪತ್ನಿ ವಿಜಯಲಕ್ಷ್ಮಿ ಮತ್ತು ಮುದ್ದಾದ ಗಿಣಿ ಜೊತೆಗಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಫೋಟೋದಲ್ಲಿ ವಿಜಯಲಕ್ಷ್ಮಿ ಅವರು ತಮ್ಮ ಕೈಯಲ್ಲಿ ಗಿಳಿಯನ್ನು ಕೂರಿಸಿಕೊಂಡು ಅದರ ಜೊತೆ ಮಾತನಾಡುತ್ತಿದ್ದಾರೆ. ಇದನ್ನು ನೋಡಿದ ದರ್ಶನ್ ನಕ್ಕು ಬೇರೆ ಕಡೆ ನೋಡುತ್ತಿರುವುದನ್ನು ಫೋಟೋದಲ್ಲಿ ಕಾಣಬಹುದು.ಇಂದು ಕೂಡ ದರ್ಶನ್ ತಮ್ಮ ಮಗ ವಿನೀಶ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಆ ಚಿತ್ರವನ್ನು ವಿಜಯಲಕ್ಷ್ಮಿ ಅವರು ಟ್ವೀಟ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ದರ್ಶನ್ ಕುಟುಂಬದವರಿಗೆ ಪ್ರಾಣಿ-ಪಕ್ಷಿಗಳೆಂದರೆ ತುಂಬಾ ಪ್ರೀತಿ. ದರ್ಶನ್ ಅವರು ಕುದುರೆ, ಹುಲಿ, ಚಿರತೆಯನ್ನು ದತ್ತು ಪಡೆದು ಸಾಕುತ್ತಿದ್ದಾರೆ. ಇನ್ನು ಮಗ ವಿನೀಶ್ ಕೂಡ ಒಂದು ಕುದುರೆಯನ್ನು ಸಾಕುತ್ತಿದ್ದು, ಇತ್ತೀಚೆಗೆ ಅದರಲ್ಲಿ ಸವಾರಿ ಕೂಡ ಮಾಡಿದ್ದರು. ಪತ್ನಿ ವಿಜಯಲಕ್ಷ್ಮಿ ಅವರು ಕೂಡ ಪ್ರಾಣಿ ಮತ್ತು ಪಕ್ಷಿಗಳ ಪ್ರೇಮಿಯಾಗಿದ್ದು, ಅವರು ತಮ್ಮ ಮನೆಯಲ್ಲಿ ಬೆಕ್ಕನ್ನು ಸಾಕಿದ್ದಾರೆ.These two❤️???? pic.twitter.com/4pfmOBUzH1— Vijayalakshmi darshan (@vijayaananth2) October 23, 2018ಇತ್ತೀಚೆಗೆ ದರ್ಶನ್ ಅವರು ತಮಿಳುನಾಡಿನ ತಿರುನಲ್ಲರ್ ಶನೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಮಗ ವಿನೀಶ್ ಮತ್ತು ಕೆಲವು ಸ್ನೇಹಿತರ ಜೊತೆ ಜನಸಾಮಾನ್ಯರಂತೆ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ್ ಪೂಜೆ ಸಲ್ಲಿಸಿ ಬಂದಿದ್ದಾರೆ.ಕಡು ನೀಲಿ ವರ್ಣದ ಉಡುಪು ಧರಿಸಿ ದೇವಸ್ಥಾನಕ್ಕೆ ತೆರಳಿದ್ದ ದರ್ಶನ್ ದೀಪದ ಎಣ್ಣೆಯ ತುಲಾಭಾರ ಹರಕೆಯನ್ನ ಪೂರೈಸಿದ್ದಾರೆ. ವರ್ಷಕ್ಕೊಮ್ಮೆ ಆದರೂ ದರ್ಶನ್ ತಿರುನಲ್ಲರ್ ಶನಿ ದೇವಸ್ಥಾನಕ್ಕೆ ಭೇಟಿ ನೀಡುವ ಪದ್ಧತಿಯನ್ನು ರೂಡಿಸಿಕೊಂಡು ಬಂದಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvಇಂದು ತಿರುನಲ್ಲರ್ ಶನೇಶ್ವರ ದೇವಾಲಯದಲ್ಲಿ ನಮ್ಮೆಲ್ಲರ ಪ್ರೀತಿಯ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ರವರು ತುಲಾಭಾರ ನೆರವೇರಿಸಿ ದೈವಕೃಪೆಗೆ ಪಾತ್ರರಾದರು.ಎಂದಿನಂತೆ ಈ ವರ್ಷವೂ ಸಹ ಶನೇಶ್ವರ ಪುಣ್ಯಕ್ಷೇತ್ರಕ್ಕೆ ನಮ್ಮೆಲ್ಲರ ಪ್ರೀತಿಯ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ @dasadarshan pic.twitter.com/5k1rgpUi5s— D Company(R)Official (@Dcompany171) October 20, 2018Sign in to your account
Username or Email Address


Password

 Remember Me


