ಹಾಸನ: ರೈತರು ಹಾಗೂ ಮುಖಂಡರು ಬೆಳೆ ಪರಿಹಾರದ ಬಗ್ಗೆ ಮಾಹಿತಿ ಕೇಳಲು ಹೋದಾಗ ಗ್ರಾಮ ಲೆಕ್ಕಾಧಿಕಾರಿ ಏಕವಚನದಲ್ಲಿ ನಿಂದಿಸಿದ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಅಗ್ಗುಂದ ಗ್ರಾಮ ಪಂಚಾಯತ್ ನಲ್ಲಿ ನಡೆದಿದೆ.ಅಗ್ಗುಂದ ಗ್ರಾಮ ಲೆಕ್ಕಾಧಿಕಾರಿ ಜಗದೀಶ್ ರೈತರು ಹಾಗೂ ಮುಖಂಡರಿಗೆ ದರ್ಪ ತೋರಿ ಆವಾಜ್ ಹಾಕಿರುವ ವಿಡಿಯೋ ವೈರಲ್ ಆಗಿದೆ. ಹೇ ನಿಮ್ಮೂರಿನ ಗ್ರಾಮ ಸಹಾಯಕನಿಗೆ ಹೇಳೋದಕ್ಕೆ ಯೋಗ್ಯತೆಯಿಲ್ಲ, ಇಲ್ಲಿ ನಮ್ಗೆ ಬಂದು ಪಾಠ ಕಲಿಸೋದಕ್ಕೆ ಬಂದಿದ್ದೀರಾ. ಇದು ನನ್ನ ಆಫೀಸ್, ಇಲ್ಲಿಂದ ಹೊರ ಹೋಗಿ. ಇಲ್ಲದಿದ್ದರೆ ಐ ವಿಲ್ ಕಿಕ್ ಔಟ್ ಎಂದು ರೈತರಿಗೆ ಗ್ರಾಮ ಲೆಕ್ಕಾಧಿಕಾರಿ ಜಗದೀಶ್ ರೈತರಿಗೆ ನಿಂದಿಸಿದ್ದಲ್ಲದೇ ದರ್ಪ ತೋರಿದ್ದಾರೆ.ವಿಎ ಜಗದೀಶ್ ಮಾಜಿ ಸೈನಿಕನೂ ಆಗಿದ್ದು, ಸಾರ್ವಜನಿಕರೊಂದಿಗೆ ಈ ನಡವಳಿಕೆ ಸರಿಯೇ ಎಂಬ ಪ್ರಶ್ನೆ ಕೇಳಿಬರುತ್ತಿದೆ. ರೈತರ ಸಮಸ್ಯೆಗೆ ಸ್ಪಂದಿಸಬೇಕಾದವರೇ ಹೀಗಾದರೆ ಹೇಗೆ ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


