ಬಳ್ಳಾರಿ: ಕಾಂಗ್ರೆಸ್ ಭದ್ರಕೋಟೆ ಬಳ್ಳಾರಿ ಕ್ಷೇತ್ರದಲ್ಲಿ ಉಪಚುನಾವಣೆ ಭಾರೀ ರಂಗೇರುತ್ತಿದ್ದು, ಮಾಜಿ ಶಾಸಕ ಅನಿಲ್ ಲಾಡ್ ಸ್ವಪಕ್ಷೀಯರ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ. ನಾನು ಸೋತಿರಬಹುದು, ನನ್ನ ಸೋಲಿಗೆ ಬೇರೆ ಯಾರು ಕಾರಣರಲ್ಲ ಸ್ವ ಪಕ್ಷದವರೇ ಕಾರಣ ಎಂದು ಅನಿಲ್ ಲಾಡ್ ಆರೋಪಿಸಿದ್ದಾರೆ.ಸಂಡೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವ ಬೃಹತ್ ಸಮಾವೇಶ ಮಾತನಾಡಿದ ಅವರು, ಕರುಣಾಕರ ರೆಡ್ಡಿ ಹಾಗೂ ಶಾಸಕ ಶ್ರೀರಾಮುಲು ಅವರು ಬಳ್ಳಾರಿಯ ಪ್ರದೇಶವನ್ನು ಕಬಳಿಸಿದ್ದಾರೆ. ಕೊನೆಗೆ ಇಬ್ಬರೂ ಪರಸ್ಪರ ದೂರು ದಾಖಲಿಸಿ, ಅರೆಸ್ಟ್ ವಾರೆಂಟ್ ಕೊಟ್ಟುಕೊಂಡಿದ್ದಾರೆ ಎಂದು ಹೇಳಿದರು.ನಮ್ಮ ಕುಟುಂಬ ಸುಮಾರು 50 ವರ್ಷದಿಂದ ಮೈನಿಂಗ್ ಮಾಡಿಕೊಂಡು ಬಂದಿದೆ. ರೆಡ್ಡಿ ಹಾಗೂ ಶ್ರೀರಾಮುಲು ಅವರಿಗೆ ಮೈನಿಂಗ್ ಮಾಡುವುದನ್ನು ಹೇಳಿದ್ದೇ ನಾನು. ಒಂದು ವೇಳೆ ನಾನಿಲ್ಲದಿದ್ದರೆ ಓಬಳಾಪುರಂ ಸೇರಿದಂತೆ ಯಾವುದೇ ಮೈನಿಂಗ್ ಪ್ರದೇಶ ಇರುತ್ತಿರಲಿಲ್ಲ. ಜನಾರ್ದನ ರೆಡ್ಡಿ ಬಂದರೆ ಏನಾಗುತ್ತದೆ? ಭೂಕಂಪ ಆಗುತ್ತದಾ ಎಂದು ಪ್ರಶ್ನಿಸಿ ವ್ಯಂಗ್ಯವಾಡಿದರು.ಜನಾರ್ದನ ರೆಡ್ಡಿ ಬಂದರೆ ಯಾವುದೇ ಪರಿಣಾಮ ಬೀರಲ್ಲ. ಅವರು ಮನೆ ಮಾಡಿಕೊಂಡು ಇದ್ದ ಕ್ಷೇತ್ರಕ್ಕೆ ಹೋಗಿ ಪ್ರಚಾರ ಮಾಡಿ ಬಂದಿರುವೆ. ಅವರು ನನ್ನ ಏನು ಪ್ರಾಣ ತೆಗೆದರಾ? ಇಲ್ಲಾ ತಾನೇ, ಯಾರು ಬಂದರು ಏನು ಆಗಲ್ಲ ಎಂದು ಲೇವಡಿ ಮಾಡಿದರು.ವಿರಾಟ್ ಕೊಹ್ಲಿಯಂತೆ ಸಿದ್ದರಾಮಯ್ಯ ಒಳ್ಳೆ ಬ್ಯಾಟ್ಸ್‍ಮನ್. ಅವರು ಚೆನ್ನಾಗಿ ಬ್ಯಾಟ್ ಮಾಡುತ್ತಾರೆ ಎಂದು ಬಳ್ಳಾರಿ ಉಪಚುನಾವಣೆ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಮಾಜಿ ಸಿಎಂ ಅವರನ್ನು ಹೊಗಳಿದರು.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


