ಬೆಂಗಳೂರು: ನಟ ಅರ್ಜುನ್ ಸರ್ಜಾ ವಿರುದ್ಧ ಮಾಡಿರುವ ಮೀಟೂ ಆರೋಪ ಹಿಂದೆ ಹಳೆಯ ದ್ವೇಷ ಇದೆ ಎಂದು ಫೀಲ್ಮ್ ಚೇಂಬರ್ ಕಾರ್ಯದರ್ಶಿ ಭಾಮಾ ಹರೀಶ್ ಹೇಳಿದ್ದಾರೆ.ಪಬ್ಲಿಕ್ ಟಿವಿ `ಬೆಂಕಿ ಬಿರುಗಾಳಿ’ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದ ಭಾಮಾ ಹರೀಶ್ ಅವರು, ಫೀಲ್ಮ್ ಚೇಂಬರ್ ಗೆ ಲಭಿಸಿರುವ ಮೂಲಗಳ ಪ್ರಕಾರ ನಟಿ ಶೃತಿ ಹರಿಹರನ್ ಅವರು ಅರ್ಜುನ್ ಸರ್ಜಾ ಅವರ ಅಳಿಯ ಧೃವ ಸರ್ಜಾರೊಂದಿಗೆ ನಟಿಸುವ ಅವಕಾಶ ನೀಡಲು ಮನವಿ ಮಾಡಿದ್ದರು. ಆದರೆ ಈ ವೇಳೆ ಅವರ ಜೋಡಿ ಹಾಗೂ ವಯಸ್ಸಿನ ಹೊಂದಾಣಿಕೆ ಕಾರಣ ನೀಡಿ ಅರ್ಜುನ್ ಸರ್ಜಾ ಅವರು ಶೃತಿ ಅವರ ಮನವಿಯನ್ನು ನಿರಾಕರಿಸಿದ್ದರು. ಅಂದಿನ ದ್ವೇಷ ದೊಡ್ಡದಾಗಿ ಇಂದು ಮೀಟೂವರೆಗೂ ಬಂದಿದೆ ಎಂದು ಗಂಭೀರ ಆರೋಪ ಮಾಡಿದರು.ದ್ವೇಷದಿಂದಲೇ ಈ ರೀತಿ ಆರೋಪ ಮಾಡಿದ್ದಾರೆ. ಇದು ಸರಿಯಲ್ಲ. ಇಲ್ಲದ ಆರೋಪ ಮಾಡುವುದು ಉತ್ತಮ ಬೆಳವಣಿಗೆ ಅಲ್ಲ ಎಂದು ಭಾಮಾ ಹರೀಶ್ ತಿಳಿಸಿದರು. ಈ ವೇಳೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮಹಿಳಾ ಹೋರಾಟಗಾರ್ತಿ, ಈ ಮೂಲಕ ಸಿನಿಮಾದಲ್ಲಿ ಲಿಂಗತಾರತಮ್ಯ ಮಾಡುತ್ತಿದ್ದಾರೆ ಎಂದು ದೂರಿದರು. ಫೀಲ್ಮ್ ಚೇಂಬರ್ ಕಾರ್ಯದರ್ಶಿ ಅವರೇ ಈ ಕುರಿತು ಆರೋಪ ಮಾಡಿದ್ದು, ಮತ್ತೊಂದು ಚರ್ಚೆಗೆ ಕಾರಣವಾಗಿದೆ.ಕೇವಲ ಸಿನಿಮಾ ಚಾನ್ಸ್ ಗಾಗಿ ಶೃತಿ ಅವರು ಈ ಆರೋಪ ಮಾಡುತ್ತಾರ ಎಂಬ ಪ್ರಶ್ನೆಯೂ ಉದ್ಭವವಾಗಿದ್ದು, ಫೀಲ್ಮ್ ಚೇಂಬರ್ ಗೆ ಕಲಾವಿದರ ಸಂಘ, ನಿರ್ದೇಶಕರ ಸಂಘ ಸೇರಿದಂತೆ ಹಲವರ ಸಂಪರ್ಕ ಇರುವುದರಿಂದ ಈ ಬಗ್ಗೆ ಗಂಭೀರ ಚರ್ಚೆ ನಡೆಸಿದ್ದಾರೆ. ಫೀಲ್ಮ್ ಚೇಂಬರ್ ನಲ್ಲೂ ಮೀಟೂ ಆರೋಪದ ಕುರಿತು ಸಭೆ ಸೇರಿ ಚರ್ಚೆ ನಡೆಸಲಾಗಿದ್ದು, ಭಾಮಾ ಹರೀಶ್ ಅವರ ಮಾತು ಚರ್ಚೆಯಾಗಿರುವ ಸಾಧ್ಯತೆಯಿದೆ.ಸದ್ಯ ಇದುವರೆಗೂ ಮೀಟೂ ವಿಚಾರವಾಗಿ ಶೃತಿ ಹರಿಹರನ್ ಅವರು ದೂರು ನೀಡಿಲ್ಲ. ಸದ್ಯ ಅರ್ಜುನ್ ಸರ್ಜಾ ಅವರು ರಾಜ್ಯದಲಿಲ್ಲ. ಅದ್ದರಿಂದ ಅವರು ಆಗಮಿಸಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರೆ ಮಾತ್ರ ಈ ಕುರಿತು ಸ್ಪಷ್ಟತೆ ಲಭಿಸಲಿದೆ. ಉಳಿದಂತೆ ಧೃವ ಸರ್ಜಾ ಅವರು ಭರ್ಜರಿ ಸಿನಿಮಾ ಬಳಿಕ ಪೊಗರು ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾ 1 ವರ್ಷದಿಂದಲೂ ಸಿದ್ಧತೆ ನಡೆಯುತ್ತಿದೆ. ಈ ವೇಳೆಯೇ ವಿಸ್ಮಯ ಚಿತ್ರದಲ್ಲಿ ನಟಿಸಿದ್ದ ಬಳಿಕ ಶೃತಿ ಅವರು ಅರ್ಜುನ್ ಸರ್ಜಾ ಅವರಲ್ಲಿ ಈ ಮನವಿ ಮಾಡಿದ್ದರು ಎನ್ನಲಾಗಿದೆ. ಇದನ್ನು ಓದಿ: ಸರ್ಜಾ ವಿರುದ್ಧ ಸೇಡಿಗಾಗಿ ಶೃತಿ ಹರಿಹರನ್ ಪರ ನಿಂತ್ರಾ ನಟ ಚೇತನ್?ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv Sign in to your account
Username or Email Address


Password

 Remember Me


