ಬೆಂಗಳೂರು: ದುನಿಯಾ ಚಿತ್ರದ ನಟಿ ರಶ್ಮಿ ಮನೆ ಮೇಲಿಂದ ಬಿದ್ದು ಯುವಕ ಸಾವನಪ್ಪಿರುವ ಘಟನೆ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದಲ್ಲಿ ನಡೆದಿದೆ.ಪ್ರತೀಕ್(25) ಮೃತಪಟ್ಟ ಯುವಕ. ವೃತ್ತಿಯಲ್ಲಿ ಫೋಟೋಗ್ರಾಫರ್ ಆಗಿರುವ ಪ್ರತೀಕ್, ರಶ್ಮಿ ಮನೆಯಲ್ಲಿ ನಡೆಯುವ ಕಾರ್ಯಕ್ರಮಗಳ ಫೋಟೋಶೂಟ್ ಮಾಡುತ್ತಿದ್ದನು. ಆದರೆ ಇದ್ದಕ್ಕಿದ್ದಂತೆ ಪ್ರತೀಕ್ ರಶ್ಮಿ ಅವರ ಮನೆಯ ಮೇಲಿಂದ ಬಿದ್ದು ಮೃತಪಟ್ಟಿದ್ದಾರೆ.ರಶ್ಮಿ ಸಹೋದರ ಅರುಣ್ ಹಾಗೂ ಪ್ರತೀಕ್ ಗೆಳೆಯರಾಗಿದ್ದರು. ಪ್ರತೀಕ್ ಭಾನುವಾರ ರಾತ್ರಿ ರಶ್ಮಿ ಮನೆಯಲ್ಲಿ ನಡೆದ ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆ. ರಶ್ಮಿ ತಮ್ಮ ಅರುಣ್ ಹಾಗೂ ಪ್ರತೀಕ್ ಟೆರೆಸ್ ಮೇಲೆ ಹೋಗಿ ಮದ್ಯಪಾನ ಪಾರ್ಟಿ ಮಾಡಿದ್ದಾರೆ.ಈ ವೇಳೆ ಎಣ್ಣೆ ಮತ್ತಿನಲ್ಲಿ ಪ್ರತೀಕ್ ಮನೆ ಮೇಲಿಂದ ಬಿದ್ದಿದ್ದಾನೆ. ತಕ್ಷಣ ಅವನನ್ನು ಆಸ್ಪತ್ರೆಗೆ ರವಾನಿಸಲಾಯಿತು. ಆದರೆ ಆಸ್ಪತ್ರೆಗೆ ಹೋಗುವ ಮಾರ್ಗಮಧ್ಯದಲ್ಲಿ ಪ್ರತೀಕ್ ಸಾವನ್ನಪ್ಪಿದ್ದಾನೆ. ಈ ಘಟನೆ ಸಂಬಂಧ ಪ್ರತೀಕ್ ಪೋಷಕರು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ರಶ್ಮಿ ಕುಟುಂಬದವರ ವಿರುದ್ಧ ದೂರು ನೀಡಿದ್ದಾರೆ.ಪೊಲೀಸರು ಘಟನೆ ನಡೆದ ಸ್ಥಳದ ಮರು ಸೃಷ್ಟಿ ಮಾಡಿ ತನಿಖೆ ಆರಂಭಿಸಿದ್ದಾರೆ. ನಾನು ಊಟ ತರುವುದಕ್ಕೆ ಕೆಳಗೆ ಹೋದಾಗ ಪ್ರತೀಕ್ ಕೆಳಗೆ ಬಿದ್ದಿದ್ದಾನೆ ಅಂತ ಪ್ರಾಥಮಿಕ ತನಿಖೆ ವೇಳೆ ಅರುಣ್ ಹೇಳಿಕೆ ನೀಡಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


