ಬೆಂಗಳೂರು: ವೇಗವಾಗಿ ಚಲಿಸುತ್ತಿದ್ದ ಕಂಟೇನರ್ ಒಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಈ ವೇಳೆ ಪಕ್ಕದಲ್ಲೇ ಚಲಿಸುತ್ತಿದ್ದ ಕಾರಿನ ಪ್ರಯಾಣಿಕರು ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ.ಯಶವಂತಪುರ ಫ್ಲೈ ಓವರ್ ಮೇಲೆ ಮಧ್ಯಾಹ್ನ 2.20ರ ವೇಳೆಗೆ ಈ ಘಟನೆ ನಡೆದಿದ್ದು, ಮಲ್ಲೇಶ್ವರಂ ಕಡೆಯಿಂದ ವೇಗವಾಗಿ ಬರುತ್ತಿದ್ದ ಕಂಟೈನರ್ ವೇಗವಾಗಿ ಬಂದು ನಿಯಂತ್ರಣ ತಪ್ಪಿ ನಡುರಸ್ತೆಯಲ್ಲೇ ಉರುಳಿ ಬಿದ್ದಿದೆ. ಈ ವೇಳೆ ಇನ್ನೋವಾ ಕಾರೊಂದು ಕಂಟೇನರ್ ಪಕ್ಕದಲ್ಲೇ ಚಲಿಸುತ್ತಿತ್ತು. ಅದೃಷ್ಟವಶಾತ್ ಕಾರಿನಲ್ಲಿದ್ದ ಪ್ರಯಾಣಿಕರು ಆಪಾಯದಿಂದ ಪಾರಾಗಿದ್ದಾರೆ.ಯಶವಂತಪುರ ಫ್ಲೈಓವರ್ ಮೇಲೆ ಸಣ್ಣ ತಿರುವು ಇದ್ದು ಮಲ್ಲೇಶ್ವರಂ ಕಡೆಯಿಂದ ಬರುವಾಗ ಎಡಗಡೆಗೆ ತಿರುಗಬೇಕಾಗುತ್ತದೆ. ಆದರೆ ಚಾಲಕ ತಿರುವು ಗಮನಿಸದ ಕಾರಣ ವೇಗವಾಗಿ ಬಂದು ನಿಯಂತ್ರಣಕ್ಕೆ ಸಿಗದೇ ಕಂಟೇನರ್ ಪಲ್ಟಿಯಾಗಿದೆ.ಘಟನೆಯಲ್ಲಿ ಕಂಟೇನರ್ ಚಾಲಕನಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕಾರಿನ ಹಿಂಭಾಗಕ್ಕೆ ಮಾತ್ರ ಹಾನಿಯಾಗಿದೆ. ಕಾರಿನಲ್ಲಿದ್ದ ಎಲ್ಲಾ ಪ್ರಯಾಣಿಕರು ಸಾವಿನ ದವಡೆಯಿಂದ ಪಾರಾಗಿದ್ದಾರೆ. ಕಂಟೇನರ್ ಪಲ್ಟಿಯಾದ ಪರಿಣಾಮ ಮೇಲ್ಸೇತುವೆ ಮೇಲೆ ಟ್ರಾಫಿಕ್ ಜಾಮ್ ಉಂಟಾಗಿದ್ದು ಯಶವಂತಪುರ ಪೊಲೀಸರು ಸ್ಥಳಕ್ಕೆ ಆಗಮಿಸಿ ಕಂಟೇನರ್ ವಾಹನ ತೆರವುಗೊಳಿಸುತ್ತಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


