ಹಾಸನ: ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಂಟಿಯಾಗಿ ಸುದ್ದಿಗೋಷ್ಟಿ ನಡೆಸಿದ ಬೆನ್ನಲ್ಲೇ ಮಾಜಿ ಸಚಿವ ಎ.ಮಂಜು ಅವರು ಗೌಡರ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಹನ್ಯಾಳು ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷದವರು ಅದನ್ನೆಲ್ಲ ಮಾತನಾಡುತ್ತಿರುವುದು ಸಹಜ. ನಾನು ದೇವೇ ಗೌಡ ಕುಟುಂಬದ ರಾಜಕೀಯ ವಿರೋಧಿ. ಹಿಂದಿನಿಂದಿಲೂ ಗೌಡರ ಕುಟುಂಬವನ್ನು ವಿರೋಧಿಸಿಕೊಂಡು ಬಂದವನು. ಈಗಲೂ ಅದನ್ನೆ ಮುಂದುವರಿಸುತ್ತೆನೆ ಅಂತ ಹೇಳಿದ್ದಾರೆ.
ನಾನು ನನ್ನ ಕಾರ್ಯಕರ್ತರನ್ನು ಉಳಿಸಬೇಕಿದೆ. ಇದು ನನ್ನ ವೈಯಕ್ತಿಕವಲ್ಲ ಕಾರ್ಯಕರ್ತರ ಕೂಗು. ದೇವೇಗೌಡರ ವಿರುದ್ಧ ಸ್ಪರ್ಧೆ ಮಾಡಿದವನು ನಾನು. ಪ್ರಜ್ವಲ್ ನಿಂತಕೊಂಡರೇ ನನಗೇನು. ಗೌಡರ ಕುಟುಂಬಕ್ಕೆ ಈ ಭಾರಿ ನನ್ನ ಸಪೋರ್ಟ್ ಇರುವುದಿಲ್ಲ ಅಂತ ತಿಳಿಸಿದ್ರು.ತಾಲೂಕಿನಲ್ಲಿ ಸುಳ್ಳು ಹೇಳಿ ರಾಜಕೀಯ ಮಾಡುತ್ತಿದ್ದರೆ ಅಂತವರನ್ನು ತಾಲೂಕು ಹಾಗೂ ಜಿಲ್ಲೆಯಿಂದಲೇ ಹೊರಗಡೆ ಕಳುಹಿಸಬೇಕಿದೆ ಅಂತ ಅರಕಲಗೂಡು ಶಾಸಕ ಎಟಿ ರಾಮುಸ್ವಾಮಿಗೆ ಟಾಂಗ್ ನೀಡಿದ್ರು. ಇಷ್ಟು ದಿನ ಗೌಡರನ್ನು ವಿರೋಧ ಮಾಡಿ ಈಗ ಹೇಗೆ ನಮ್ಮ ಕಾರ್ಯಕರ್ತರಿಗೆ ಸಪೋರ್ಟ್ ಮಾಡಿ ಅಂತ ಹೇಳುವುದು ಎಂದು ಪ್ರಶ್ನಸಿದ ಅವರು, ಇದರ ಬಗ್ಗೆ ನಮ್ಮ ಹೈಕಮಾಂಡ್ ಜೊತೆಗೆ ಮಾತನಾಡಿದ್ದೇನೆ ಅಂದ್ರು.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


