ಬೆಂಗಳೂರು: ಹಳೆಯ ವಾಹನ ಬಳಕೆದಾರರಿಗೆ ಶಾಕಿಂಗ್ ನ್ಯೂಸ್, ರಾಜ್ಯದಲ್ಲಿ ವಾಯುಮಾಲಿನ್ಯ ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ವಾಯು ನಿಯಂತ್ರಣ ಮಂಡಳಿ ಇದಕ್ಕೆ ಕಡಿವಾಣ ಹಾಕಲು ಸಿದ್ಧತೆ ನಡೆಸುತ್ತಿದೆ.ದೆಹಲಿ ಬಳಿಕ ವಾಯುಮಾಲಿನ್ಯದಲ್ಲಿ ಬೆಂಗಳೂರು ಎರಡನೇ ಸ್ಥಾನದಲ್ಲಿ ಇರುವುದರಿಂದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಲವು ಕಟ್ಟುನಿಟ್ಟು ಕ್ರಮಗಳ ಜಾರಿಗೆ ಒತ್ತಾಯಿಸಿ ಸರ್ಕಾರಕ್ಕೆ ಪತ್ರ ಬರೆದಿದೆ. ಸಿಟಿಯಲ್ಲಿ 16 ಲಕ್ಷ ಹಳೆಯ ವಾಹನಗಳಿರುವುದು ಗುರುತಿಸಲಾಗಿದೆ.ಹಳೆಯ ವಾಹನಗಳು ಹೊರಸೂಸುವ ವಿಷಕಾರಿ ಅನಿಲದಿಂದ ನಗರದಲ್ಲಿ ವಾಯುಮಾಲಿನ್ಯ ಉಂಟಾಗುತ್ತಿದೆ. ಹೀಗಾಗಿ ಹದಿನೈದು ವರ್ಷಕ್ಕಿಂತ ಹಳೆಯ ಪೆಟ್ರೋಲ್ ಡೀಸೆಲ್ ವಾಹನಗಳ ಸಂಚಾರ ಬ್ಯಾನ್ ಮಾಡುವಂತೆ ವರದಿ ನೀಡಿದೆ. ಈ ವರದಿಯನ್ನ ಕೆಎಸ್ ಪಿಸಿಬಿ 2016 ರಲ್ಲೇ ಸರ್ಕಾರಕ್ಕೆ ನೀಡಿದರೂ ಇದನ್ನು ಜಾರಿಗೆ ತರಲು ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಈಗ ಕೆಎಸ್‍ಪಿಸಿಬಿ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಹಳೆಯ ವಾಹನಗಳನ್ನ ಬ್ಯಾನ್ ಮಾಡುವಂತೆ ಪತ್ರ ಬರೆಯಲಾಗಿದೆ ಎಂದು ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರು ಲಕ್ಷ್ಮಣ ಹೇಳಿದ್ದಾರೆ.ನಗರದಲ್ಲಿ 70 ಲಕ್ಷ ವಾಹನಗಳಿದ್ದು, 32,000 ವಾಹನಗಳ ಹೊಗೆ ತಪಾಸಣೆಯನ್ನ ಮಾಲಿನ್ಯ ನಿಯಂತ್ರಣ ಮಂಡಳಿ ಮಾಡಿಸಿದೆ. ಇದರಲ್ಲಿ 14% ಪೆಟ್ರೋಲ್ ವಾಹನಗಳು ಹಾಗೂ 25% ಡೀಸೆಲ್ ವಾಹನಗಳಿಂದ ವಿಷಕಾರಿ ಅನಿಲ ಬರುತ್ತಿರುವುದು ಗಮನಿಸಲಾಗಿದೆ. ಇವುಗಳಿಂದ ಹೊರಸೂಸುವ ಗಾಳಿಯ ಮಟ್ಟ ರಾಷ್ಟ್ರೀಯ ಮಾನದಂಡಕ್ಕಿಂತ ಕಡಿಮೆ ಇರುವುದು ಗೊತ್ತಾಗಿದೆ. ಪ್ರಮುಖ 48 ಅಂಶಗಳನ್ನು ಕಾರ್ಯೋನ್ಮುಖ ಮಾಡಲು ಚರ್ಚೆ ನಡೆಯುತ್ತಿದ್ದು, ನಗರದಲ್ಲಿ ಪಾರ್ಕಿಂಗ್ ವ್ಯವಸ್ಥೆ ಹೆಚ್ಚಿಸಲು ಹಾಗೇ ಪಾರ್ಕಿಂಗ್ ಶುಲ್ಕ ಹೆಚ್ಚಿಸುವಂತೆಯೂ ಮಂಡಳಿ ವರದಿ ನೀಡಿದೆ. ಅಲ್ಲದೆ ನಗರದಲ್ಲಿ ಬೃಹತ್ ಗಾತ್ರದ ವಾಹನಗಳ ಸಂಚಾರಕ್ಕೆ ರಿಂಗ್ ರಸ್ತೆಗಳಲ್ಲಿ ಡೈವರ್ಟ್ ಮಾಡಬೇಕು. ಕಾನೂನು ಮೀರಿದವರಿಗೆ ದೊಡ್ಡ ಪ್ರಮಾಣದ ದಂಡ ವಿಧಿಸಬೇಕು ಎಂದು ವರದಿ ಕೂಡಾ ನೀಡಿದೆ. ಪರಿಸರವಾದಿಗಳು ಪಿಸಿಬಿ ವರದಿಯನ್ನು ಸ್ವಾಗತಿಸಿವೆ ಎಂದು ಪರಿಸರವಾದಿ ಸುರೇಶ್ ಹೆಬ್ಬಳೀಕರ್ ತಿಳಿಸಿದ್ದಾರೆ.15 ವರ್ಷಕ್ಕಿಂತ ಹಳೆಯ ವಾಹನಗಳನ್ನ ಉಪಯೋಗ ಮಾಡುವವರಿಗೆ ಮಾಲಿನ್ಯ ನಿಯಂತ್ರಣ ಮಂಡಳಿ ಶಾಕಿಂಗ್ ನ್ಯೂಸ್ ನೀಡಿದ್ದು, ಸರ್ಕಾರ ನೂತನ ನಿಯಮ ತಂದಿದ್ದೇ ಆದಲ್ಲಿ ನಗರದಲ್ಲಿ ಹದಿನೈದು ಅಥವಾ 20 ವರ್ಷ ಹಳೇಯ ವಾಹನಗಳು ಗುಜುರಿ ಸೇರಲಿವೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


