ಬೆಂಗಳೂರು: ಮೀಟೂ ಬಂದ ಮೇಲೆ ನಿಮಗೆಲ್ಲಾ ರೆಕ್ಕೆ ಪುಕ್ಕ ಬಂತಾ. ಇದಕ್ಕೆ ಮುಂಚೆ ಎಲ್ಲಿ ಹೋಗಿತ್ತು ನಿಮ್ಮ ರೆಕ್ಕೆ ಪುಕ್ಕಾ ಎಂದು ಅರ್ಜುನ್ ಸರ್ಜಾ ವಿರುದ್ಧ ಆರೋಪ ಮಾಡಿದ್ದ ಗೃಹಿಣಿಯ ಮೇಲೆ ಸರ್ಜಾ ಅವರ ಮಾವ ಹಿರಿಯ ನಟ ರಾಜೇಶ್ ಅವರು ಕಿಡಿಕಾರಿದ್ದಾರೆ.ನಟಿ ಶೃತಿ ಹರಿಹರನ್ ಬೆನ್ನಲ್ಲೇ ಗೃಹಿಣಿಯೊಬ್ಬರು ನಟ ಅರ್ಜುನ್ ಸರ್ಜಾ ಅವರ ವಿರುದ್ಧ ಮೀಟೂ ಆರೋಪವನ್ನು ಮಾಡಿದ್ದರು. ಈ ಬಗ್ಗೆ ಪ್ರತಿಕ್ರಿಸಿದ ಸರ್ಜಾ ಅವರ ಮಾವ ಹಿರಿಯ ನಟ ರಾಜೇಶ್ ಅವರು, 15 ವರ್ಷ ಈ ಘಟನೆ ನಡೆದಿದೆ. ಆಗ ಪೊಲೀಸರಿಗೆ, ಕಲಾವಿದರ ಸಂಘದವರಿಗೆ ಮತ್ತು ಚೇಂಬರಿಗೆ ದೂರು ಕೊಡಬಹುದಿತ್ತು. ಆಗ ಯಾಕೆ ದೂರು ಕೊಟ್ಟಿಲ್ಲ ಎಂದು ಪ್ರಶ್ನೆ ಕೇಳಿ ಗೃಹಿಣಿ ಮೇಲೆ ಕಿಡಿಕಾರಿದ್ದಾರೆ. ಇದನ್ನೂ ಓದಿ: ರೂಂ ನಂಬರ್ ನೀಡಿ ರೂಂಗೆ ಬನ್ನಿ ಎಂದಿದ್ರು – ಅರ್ಜುನ್ ಸರ್ಜಾ ವಿರುದ್ಧ ಬೆಂಗ್ಳೂರು ಗೃಹಿಣಿ ಆರೋಪಶೂಟಿಂಗ್ ನಲ್ಲಿ ನಿರ್ದೇಶಕರು ಇರುತ್ತಾರೆ. ಅವರ ಬಳಿ ಹೋಗಿ ನನ್ನ ಜೊತೆ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ದೂರ ಕೊಡಬೇಕು ಎಂದರು. ಆಗ ಗೃಹಿಣಿ ನನಗೆ ಧೈರ್ಯ ಇರಲಿಲ್ಲ ಎಂದು ಹೇಳಿದ್ದಾರೆ. ಈ ವೇಲೆ ರಾಜೇಶ್ ಅವರು ಧೈರ್ಯ ಇಲ್ಲ ಎಂದ ಮೇಲೆ ಚಿತ್ರರಂಗಕ್ಕೆ ಯಾಕೆ ಬಂದ್ರಿ, ಮನೆಯಲ್ಲಿ ಇರಬೇಕು. ಮೀಟೂ ಬಂದ ಮೇಲೆ ನಿಮಗೆಲ್ಲಾ ರೆಕ್ಕೆ ಪುಕ್ಕ ಬಂತಾ. ಇದಕ್ಕೆ ಮುಂಚೆ ಎಲ್ಲಿ ಹೋಗಿತ್ತು ನಿಮ್ಮ ರೆಕ್ಕೆ ಪುಕ್ಕ. ಮೀಟೂ ಬಂದು ಅವಕಾಶ ಕಲ್ಪಿಸಿಕೊಟ್ಟಿದೆ. ಇದಕ್ಕೆ ಮುಂಚೆ ಎಲ್ಲಿ ಹೋಗಿತ್ತು ಎಂದು ಗೃಹಿಯ ವಿರುದ್ಧ ಗುಡುಗಿದ್ದಾರೆ.80 ವರ್ಷದಿಂದ ಇಲ್ಲದಿರುವ ಕಂಪ್ಲೇಂಟ್ ಈಗ ಯಾಕೆ ಬಂತು. ಸಿನಿಮಾ ರಂಗಕ್ಕೆ ಬಂದ ಮೇಲೆ ಅಡ್ಜೆಸ್ಟ್ ಮಾಡಿಕೊಂಡು ಹೋಗಬೇಕು. ಅದು ಬಿಟ್ಟು, ಅವರ ತಪ್ಪು ಹುಡುಕಿಕೊಂಡು ಹೋಗಿ ಅವರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಬೇಡಿ ಎಂದು ಹೇಳಿದ್ದಾರೆ,ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvhttps://www.youtube.com/watch?v=LFKlX3O1iuMSign in to your account
Username or Email Address


Password

 Remember Me


