ಬೆಂಗಳೂರು: ಇತ್ತೀಚೆಗೆ ನಟ ಸುದೀಪ್ ಕುಟುಂಬ ಮೆಗಸ್ಟಾರ್ ಚಿರಂಜೀವಿ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಆ ಫೋಟೋಗಳು ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗಿತ್ತು. ಈಗ ಸುದೀಪ್ ಮತ್ತು ಪತ್ನಿ ಪ್ರಿಯಾ ಸುದೀಪ್ ಒಟ್ಟಿಗಿನ ಫೋಟೋವೊಂದು ಸಾಮಾಜಿಕ ಜಾಲತಾಣಗಲ್ಲಿ ಹರಿದಾಡುತ್ತಿದೆ.ಇದೇ ತಿಂಗಳು 18 ಆಯುಧ ಪೂಜೆಯ ದಿನ ಸುದೀಪ್ ಮತ್ತು ಪ್ರಿಯಾ ಅವರು ಮದುವೆಯಾದ ದಿನವಾಗಿದ್ದು, ಅವರ ಮದುವೆ ವಾರ್ಷಿಕೋತ್ಸವ ಇತ್ತು. ಮದುವೆಯಾಗಿ 17 ವರ್ಷವಾಗಿದ್ದು, ಸಂಬಂಧಿಕರು, ಸ್ನೇಹಿತರ, ಅಭಿಮಾನಿಗಳು ಅವರ ಮದುವೆಯ ಶುಭಾಶಯವನ್ನು ಕೋರಿದ್ದಾರೆ.ವಿವಾಹ ವಾರ್ಷಿಕೋತ್ಸವಕ್ಕೆ ಶುಭಾಶಯವನ್ನು ಕೋರಿದ್ದ ಎಲ್ಲರಿಗೂ ಪ್ರಿಯಾ ಅವರು ಪತಿಯೊಂದಗಿನ ಸುಂದರ ಫೋಟೋವನ್ನು ಹಾಕಿ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ. ನಟ ಪ್ರದೀಪ್ ಬೋಗಾಡಿ ಅವರು ಸುದೀಪ್ ಮತ್ತು ಪ್ರಿಯಾ ಅವರು ಒಟ್ಟಿಗೆ ಇರುವ ಫೋಟೋವನ್ನು ಹಾಕಿ ಶುಭಾಶಯವನ್ನು ತಿಳಿಸಿದ್ದರು. ಅವರು ಪೋಸ್ಟ್ ಮಾಡಿದ್ದ ಫೋಟೋವನ್ನೇ ಪ್ರಿಯಾ ಅವರು ಪೋಸ್ಟ್ ಮಾಡಿ ಧನ್ಯವಾದವನ್ನು ತಿಳಿಸಿದ್ದಾರೆ.ಇತ್ತೀಚೆಗೆ ಸುದೀಪ್ ಅವರು ಕುಟುಂಬದವರ ಜೊತೆ ಸಾಕಷ್ಟು ಸಮಯವನ್ನು ಕಳೆಯುತ್ತಿದ್ದಾರೆ. ಶುಕ್ರವಾರವಷ್ಟೆ ‘ದ ವಿಲನ್’ ಸಿನಿಮಾ ರಿಲೀಸ್ ಆಗಿದ್ದು, ಪ್ರಿಯಾ ಅವರು ಥಿಯೇಟರ್ ಗೆ ಹೋಗಿ ಸಿನಿಮಾವನ್ನು ನೋಡಿ ನಿರ್ದೇಶಕ ಪ್ರೇಮ್, ಎನರ್ಜಿಟಿಕ್ ಶಿವಣ್ಣ ಮತ್ತು ನಮ್ಮ ಪ್ರೀತಿ ಹೀರೋ ಸುದೀಪ್ ಸೇರಿದಂತೆ ಚಿತ್ರತಂಡಕ್ಕೆ ಧನ್ಯವಾದಗಳು. ಅಭಿಮಾನಿಗಳು ಸಿನಿಮಾ ಬಿಡುಗಡೆಯನ್ನು ಒಂದು ಹಬ್ಬದಂತೆ ಆಚರಿಸಿದ್ದಾರೆ ಎಂದು ಟ್ವೀಟ್ ಮಾಡಿದ್ದರು.ಸದ್ಯಕ್ಕೆ ಸುದೀಪ್ ತೆಲುಗಿನ ‘ಸೈರ ನರಸಿಂಹ ರೆಡ್ಡಿ’, ‘ಪೈಲ್ವಾನ್’ ಸಿನಿಮಾವನ್ನು ಮಾಡುತ್ತಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


