ಬೆಂಗಳೂರು: ಮಹಿಳೆಯನ್ನು ಕಿಡ್ನಾಪ್ ಮಾಡಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದ ಹೆಣ್ಣೂರಿನ ವಡ್ಡರಪಾಳ್ಯದಲ್ಲಿ ನಡೆದಿದೆ.ಬಾಣಸವಾಡಿಯ ಕರಿಯಣ್ಣಪಾಳ್ಯದ ನಿವಾಸಿ ಶಾಂತಿ(52) ಕೊಲೆಯಾದ ಮಹಿಳೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗರಾಜ್, ಚೆಲುವ ಅಲಿಯಾಸ್ ಮೋಹನ್ ರನ್ನು ಬಂಧಿಸಲಾಗಿದೆ.ಅಕ್ಟೋಬರ್ 10 ರಂದು ಬಾಣಸವಾಡಿ ಠಾಣೆಯಲ್ಲಿ ಶಾಂತಿ ನಾಪತ್ತೆಯಾಗಿದ್ದಾರೆ ಎಂದು ದೂರು ದಾಖಲಾಗಿತ್ತು. ಆದರೆ ಇಂದು ಶಾಂತಿ ಹೆಣ್ಣೂರು ಬಳಿ ಶವವಾಗಿ ಪತ್ತೆಯಾಗಿದ್ದಾರೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಬಾಣಸವಾಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಶಾಂತಿ 50 ಸಾವಿರ ರೂ. ಹಣವನ್ನು ಸುಂದರ್ ಗೆ ನೀಡಬೇಕಾಗಿತ್ತು. ಹಣಕಾಸಿನ ವಿಚಾರವಾಗಿ ಕರೆಸಿಕೊಂಡು ಅಕ್ಟೋಬರ್ 9 ರಂದು ಶಾಂತಿಯನ್ನು ಬಾಣಸವಾಡಿಯಿಂದ ಕಿಡ್ನಾಪ್ ಮಾಡಿದ್ದ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಬಳಿಕ ಹೆಣ್ಣೂರಿನ ವಡ್ಡರಪಾಳ್ಯದಲ್ಲಿ ಶಾಂತಿಯ ಮೃತದೇಹ ಎಸೆದಿದ್ದಾರೆ.ನಾಪತ್ತೆ ದೂರು ದಾಖಲಾದ ಬಳಿಕ ಶಾಂತಿ ಪೂರ್ವಪರ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದಾಗ ಶಾಂತಿ ಜೊತೆ ಯುವಕರ ಗುಂಪು ಜಗಳ ಮಾಡಿರುವ ವಿಚಾರ ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ನಾಗರಾಜ್, ಚೆಲುವ ಅಲಿಯಾಸ್ ಮೋಹನ್ ರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನಾವೇ ಈ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


