ಬೆಂಗಳೂರು: ನಗರದ ಯಶವಂತಪುರದ ಮತ್ತಿಕೆರೆಯ ಎಲ್‍ಸಿಆರ್ ರಸ್ತೆಯಲ್ಲಿ ಬಿಯರ್ ಬಾಟಲ್ ನಿಂದ ಯುವಕನ ತಲೆಗೆ ಹೊಡೆದು ಹತ್ಯೆ ಮಾಡಿದ್ದ ಕೊಲೆಗೆ ಟ್ವಿಸ್ಟ್ ಸಿಕ್ಕಿದ್ದು, ಬೀದಿಯಲ್ಲಿ ಪ್ರಿಯತಮೆಗೆ ಮುತ್ತುಕೊಟ್ಟಿದ್ದಕ್ಕೆ ಆತನನ್ನ ಕೊಲೆ ಮಾಡಲಾಗಿದೆ.ಉತ್ತರಾಖಂಡ್ ಮೂಲದ ಜಗದೀಪ್ ಸಿಂಗ್(21) ಮೃತ ದುರ್ದೈವಿ. ಜಗದೀಪ್ ನಗರದ ಹೋಟೆಲ್ ವೊಂದರಲ್ಲಿ ಶೆಫ್ ಆಗಿ ಕೆಲಸ ಮಾಡುತ್ತಿದ್ದನು. ದಸರಾ ಹಿನ್ನೆಲೆಯಲ್ಲಿ ರಜೆ ಕೊಡಲಾಗಿತ್ತು. ಹೀಗಾಗಿ ರಜೆಯನ್ನ ಮಜಾ ಮಾಡಲು ಅದೇ ಹೋಟೆಲ್‍ನಲ್ಲಿದ್ದ ಸ್ನೇಹಿತ ಸುಹಾಸ್ ಹಾಗೂ ಆತನ ತನ್ನ ಪ್ರಿಯತಮೆಯನ್ನು ಕರೆದುಕೊಂಡು ಪಾರ್ಟಿ ಮಾಡಿದ್ದರು.
ಮತ್ತಿಕೆರೆಯ ಎಲ್‍ಸಿ ಆಂಗ್ಲ ಶಾಲೆಯ ಬಳಿ ಇರುವ ಮನೆಗೆ ಹೋಗುವ ಮುನ್ನ ಪ್ರಿಯತಮೆ ಜೊತೆ ತಬ್ಬಿ ಕಿಸ್ ಮಾಡಿದ್ದಾನೆ. ಅದೇ ಸಮಯಕ್ಕೆ ಅಲ್ಲಿಗೆ ಪುಂಡರ ಗ್ಯಾಂಗ್ ಬಂದು ಪ್ರಿಯತಮೆಗೆ ಅವಾಚ್ಯವಾಗಿ ಬೈದು ಅಸಭ್ಯವಾಗಿ ನಡೆದುಕೊಂಡಿದ್ದಾರೆ. ಆಗ ಅವರ ವಿರುದ್ಧ ಜಗದೀಪ್ ಸಿಂಗ್ ಮತ್ತು ಸುಹಾಸ್ ಗಲಾಟೆ ಮಾಡಿದ್ದಾರೆ. ಈ ವೇಳೆ ಎಣ್ಣೆ ಮತ್ತಿನಲ್ಲಿದ್ದ ದುಷ್ಟರು ಬಿಯರ್ ಬಾಟಲ್ ಮತ್ತು ಡ್ಯಾಗರ್ ತೆಗೆದು ಚುಚ್ಚಿ ಜಗದೀಶ್‍ನನ್ನು ಕೊಲೆಗೈದಿದ್ದಾರೆ ಎಂದು ಉತ್ತರ ವಿಭಾಗ ಡಿಸಿಪಿ ಚೇತನ್ ಸಿಂಗ್ ರಾಠೋಡ್ ಹೇಳಿದ್ದಾರೆ.ಸಿಸಿಟಿವಿಯಲ್ಲಿ ಪುಂಡರ ಕೃತ್ಯ ಸೆರೆಯಾಗಿದ್ದು, ಇದರ ಆಧಾರದ ಮೇಲೆ ಈಗಾಗಲೇ ಮೂವರನ್ನು ಬಂಧಿಸಿ ತನಿಖೆ ಶುರುಮಾಡಿದ್ದೇವೆ. ಆರೋಪಿಗಳು ಎಷ್ಟು ಎಣ್ಣೆ ಹೊಡೆದಿದ್ದರೂ ಅಂದರೆ ಅವರಿಗೆ ಕೊಲೆ ಮಾಡಿದ್ದು ಗೊತ್ತಿಲ್ಲ ಎಂದು ವಿಚಾರಣೆ ವೇಳೆ ಹೇಳಿದ್ದಾರೆ ಅಂತ ಪೊಲೀಸರು ತಿಳಿಸಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


