ಚಿಕ್ಕಮಗಳೂರು: ಮೂರು ಸಿನಿಮಾಗಳಲ್ಲಿ ನಟಿಸಿ ಒಂದು ಬಿಗ್ ಹಿಟ್‍ಗಾಗಿ ಕಾಯುತ್ತಿರುವ ಡಾ. ರಾಜ್‍ಕುಮಾರ್ ಅವರ ಕುಟುಂಬದ ಕುಡಿ, ರಾಘವೇಂದ್ರ ರಾಜ್ ಕುಮಾರ್ ಮಗ ವಿನಯ್ ರಾಜ್‍ಕುಮಾರ್ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಸೆಟ್ಲ್ ಆಗಿದ್ದಾರೆ.ದೇವನೂರು ಚಂದ್ರು ನಿರ್ದೇಶನದ ಗ್ರಾಮಾಯಣ ಚಿತ್ರಕ್ಕಾಗಿ ಚಿಕ್ಕಮಗಳೂರಿನಲ್ಲಿ ಲೋಕೇಶನ್ ಹುಡುಕಿದ್ದು, ಇನ್ನೊಂದು ವಾರದಲ್ಲಿ ಚಿತ್ರದ ಶೂಟಿಂಗ್ ಆರಂಭವಾಗಲಿದೆ. ಚಿಕ್ಕಮಗಳೂರು, ಕಡೂರು ಸುತ್ತಮುತ್ತ ಹತ್ತಾರು ಲೋಕೇಶನ್ ಫೈನಲ್ ಮಾಡಿಡುವ ಚಿತ್ರತಂಡ ಇದೇ 23ರಿಂದ ಕಡೂರು ತಾಲೂಕಿನ ದೇವನೂರಿನಿಂದ ಚಿತ್ರೀಕರಣವನ್ನ ಸ್ಟಾರ್ಟ್ ಮಾಡಲಿದೆ.ಈ ಚಿತ್ರ ಸಂಪೂರ್ಣ ಹಳ್ಳಿ ಸೊಗಡಿನ ಚಿತ್ರವಾಗಿದ್ದು, ಆಧುನಿಕ ಜಗತ್ತಿನ ಯುವಜನತೆಗೆ ಹಳ್ಳಿಗಳೆಂದರೆ ಇರುವ ಭಾವನೆಯೇ ಚಿತ್ರದ ಒಲ್ ಲೈನ್ ಸ್ಟೋರಿ. ತಮಿಳಿನಲ್ಲಿ ಎರಡು ಚಿತ್ರಗಳಲ್ಲಿ ನಟಿಸಿರುವ ಅಮೃತ ನಟ ವಿನಯ್‍ಗೆ ನಾಯಕಿಯಾಗಿದ್ದಾರೆ.ಹುಡುಗರು ಎಲ್ಲಾ ಕೆಲಸವನ್ನು ಮಾಡ್ತಾರೆ, ನಾನ್ಯಾಕೆ ಮಾಡೋದಕ್ಕೆ ಆಗೋದಿಲ್ಲ, ನಾನು ಮಾಡಬಲ್ಲೇ ಎನ್ನುವುದು ನಾಯಕಿ ಅಮೃತಾ ಅವರ ಪಾತ್ರವಾಗಿದೆ. ಈ ಚಿತ್ರದಲ್ಲಿ ಜ್ಯೂನಿಯರ್ ಆರ್ಟಿಸ್ಟ್ ಗಳಾಗಿ ಸ್ಥಳಿಯರನ್ನೇ ಬಳಸಿಕೊಳ್ಳಲು ಚಿತ್ರತಂಡ ಮುಂದಾಗಿದೆ. ಏಕೆಂದರೆ ಸ್ಥಳಿಯರಿಗೆ ಹಳ್ಳಿ ಸೊಗಡಿನ ಜೀವನ ಶೈಲಿ, ಕಷ್ಟ-ಕಾರ್ಪಣ್ಯಗಳ ಅರಿವಿರುತ್ತೆಂದು ಸ್ಥಳಿಯರನ್ನೇ ಬಳಸಿಕೊಳ್ಳಲು ಚಿತ್ರತಂಡ ಯೋಚಿಸಿದೆ. ಅಷ್ಟೇ ಅಲ್ಲದೇ ಗ್ರಾಮಸ್ಥರು ಕೂಡ ಚಿತ್ರತಂಡಕ್ಕೆ ಬೇಕಾದ ಸೌಲಭ್ಯ, ಹಬ್ಬದ ವಾತಾವರಣ ನಿರ್ಮಾಣ ಸೇರಿದಂತೆ ಚಿತ್ರಕ್ಕೆ ಬೇಕಾದ ಪೂರಕ ವ್ಯವಸ್ಥೆ ಕಲ್ಪಿಸಿಕೊಡೋ ಭರವಸೆ ನೀಡಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


