ಬೆಂಗಳೂರು: ಟೀ ಮತ್ತು ಸಿಗರೇಟ್ ಪಡೆದ ಪುಂಡರಿಗೆ ಹಣ ಕೇಳಿದ್ದಕ್ಕೆ ಬೇಕರಿ ಮಾಲೀಕ ಸೇರಿ ಅಲ್ಲಿ ಕೆಲಸ ಮಾಡುವಂತವರ ಮೇಲೆ ನಾಲ್ಕು ಜನ ಕಿಡಿಗೇಡಿಗಳು ಹಲ್ಲೆ ನಡೆಸಿರುವಂತಹ ಘಟನೆ ಆನೇಕಲ್ ತಾಲೂಕಿನ ಸರ್ಜಾಪುರ ಸಮೀಪದ ಬಿಲ್ಲಾಪುರಗೇಟ್ ಪಿಂಪಲ್ಸ್ ಮಾರ್ಟ್ ಬಳಿ ನಡೆದಿದೆ.ಈ ಘಟನೆ ಗುರುವಾರ ರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ನಾಲ್ಕು ಜನ ಕಿಡಿಗೇಡಿಗಳು ಬೇಕರಿಗೆ ಬಂದು ಟೀ ಕುಡಿದಿದ್ದಾರೆ. ನಂತರ ಹಣ ಕೇಳಿದ ಬೇಕರಿ ಮಾಲೀಕ ಸೇರಿ ಅಲ್ಲಿ ಕೆಲಸ ಮಾಡುವಂತವರ ಮೇಲೆ ಈ ನಾಲ್ಕು ಜನ ಕಿಡಿಗೇಡಿಗಳು ಮನಬಂದಂತೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.ಈ ಕಿಡಿಗೇಡಿಗಳ ದುಂಡಾವರ್ತನೆಯ ದೃಶ್ಯಗಳು ಬೇಕರಿಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಯುವಕರು ಸ್ಥಳೀಯ ನಿವಾಸಿಗಳಾಗಿದ್ದು ಪೊಲೀಸರ ಹಾಗು ಜನಪ್ರತಿನಿಧಿಗಳು ಇವರ ಬೆಂಬಲಕ್ಕೆ ನಿಂತಿದ್ದಾರೆ. ಇಂತಹ ಪ್ರಕರಣಗಳು ಪದೇ ಪದೇ ನಡೆಯುತ್ತಿದ್ದರು ಪೊಲೀಸರು ಯಾವ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಲ್ಲಿನ ನಿವಾಸಿಗಳು ಆರೋಪಿಸುತ್ತಾರೆ.ಸದ್ಯ ಹಲ್ಲೆಗೊಳಗಾದ ಬೇಕರಿ ಮಾಲೀಕ ಬದ್ರುದ್ದೀನ್ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿ ಆ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ರಕ್ಷಣೆ ಕೋರಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


