ಆನೇಕಲ್: ಸಾಫ್ಟ್ ವೇರ್ ಕಂಪನಿಯೊಂದರ ಕ್ಯಾಬ್ ಚಾಲಕನನ್ನು ಕ್ಯಾಬ್ ಸಮೇತ ಕಿಡ್ನಾಪ್ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.ಹರಿಬಾಬು ಕಿಡ್ನಾಪ್ ಆದ ಕ್ಯಾಬ್ ಚಾಲಕ. ಬೊಮ್ಮನಹಳ್ಳಿಯ ಕಂಪನಿಯೊಂದರಲ್ಲಿ ಕ್ಯಾಬ್ ಚಾಲಕನಾಗಿದ್ದ ಇವರು ಹೊಂಗಸಂದ್ರದಲ್ಲಿ ನೆಲೆಸಿದ್ದ. ಇದೇ ತಿಂಗಳ 16 ರಂದು ರಾತ್ರಿ ಉದ್ಯೋಗಿಯೊಬ್ಬರನ್ನು ಹೊಸೂರು ಮುಖ್ಯರಸ್ತೆಯ ಹೆಬ್ಬಗೋಡಿಗೆ ಡ್ರಾಪ್ ಮಾಡಿ ವಾಪಸ್ಸಾಗುವಾಗ ಕಾಣೆಯಾಗಿದ್ದಾರೆ.ಕಾಣೆಯಾದ ಮರುದಿನವೇ ಈತನ ಅಣ್ಣ ಅಶೋಕ್ ಎಂಬವರಿಗೆ ಕಿಡ್ನಾಪರ್ಸ್ ಕರೆ ಮಾಡಿ 50 ಸಾವಿರ ನೀಡುವಂತೆ ಕೇಳಿದಾಗ ಪ್ರಕರಣ ಬೆಳಕಿಗೆ ಬಂದಿದೆ. ನಂತರ ಈ ಬಗ್ಗೆ ಅಶೋಕ್ ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಹರಿಬಾಬು ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


