ಮೈಸೂರು: ಇಂದು ಸಮಸ್ತ ನಾಡಿನ ಜನತೆಯೂ ಜಂಬೂಸವಾರಿಗೆ ಕಾತುರದಿಂದ ಕಾಯುತ್ತಿದ್ದಾರೆ. ಆದ್ರೆ ವಿಜಯದಶಮಿ ದಿನವೇ ಪ್ರಮೋದಾ ದೇವಿ ಅವರ ತಾಯಿ ವಿಧಿವಶರಾಗಿದ್ದಾರೆ.ರಾಜವಂಶಸ್ಥೆ ಪ್ರಮೋದಾ ದೇವಿ ಅವರ ತಾಯಿ ಪುಟ್ಟಚಿನ್ನಮ್ಮಣಿ(98) ಅವರು ನಿಧನರಾಗಿದ್ದಾರೆ. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಪುಟ್ಟಚಿನ್ನಮ್ಮಣಿ ಅವರು ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ.ಪುಟ್ಟಚಿನ್ನಮ್ಮಣಿ ಅವರು ಅನೇಕ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ.ಅರಮನೆಯಲ್ಲಿ ಜಂಬೂಸವಾರಿಯ ಹಬ್ಬದ ವಾತಾವರಣ ಕಂಗೊಳಿಸುತ್ತಿತ್ತು. ಆದರೆ ಈಗ ಪುಟ್ಟಚಿನ್ನಮ್ಮಣಿ ಅವರ ಸಾವಿನಿಂದ ಅರಮನೆಯಲ್ಲಿ ಸೂತಕದ ವಾತಾವರಣ ಆವರಿಸಿಕೊಂಡಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


