ಮಡಿಕೇರಿ: ಹಣ ಕೇಳಿದ್ದಕ್ಕೆ ಕ್ಯಾಂಟೀನ್ ಯುವಕರ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ನಗರದಲ್ಲಿ ರಾತ್ರಿ ನಡೆದಿದೆ.ನಗರದ ಮಾರ್ಕೆಟ್ ಹಿಂಭಾಗ ಕ್ಯಾಂಟೀನ್ ನಲ್ಲಿ ಈ ದುರ್ಘಟನೆ ನಡೆದಿದೆ. ಕ್ಯಾಂಟೀನ್ ನಡೆಸುತ್ತಿದ್ದ ರಿಯಾಝ್ ಮತ್ತು ಸಮೀಮ್ ಮೇಲೆ ಗುಂಡಿನ ದಾಳಿ ನಡೆದಿದ್ದು, ರಿಯಾಝ್ ತೊಡೆ ಭಾಗಕ್ಕೆ ಹಾಗೂ ಸಮೀಮ್ ಕಾಲಿಗೆ ಗಾಯಗಳಾಗಿದ್ದು, ಇಬ್ಬರು ಗಾಯಾಳುಗಳನ್ನ ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.ಕ್ಯಾಂಟೀನ್ ನಲ್ಲಿ ಯುವಕರು ಎಗ್‍ರೋಲ್ ಪಡೆದು ಹಣ ಕೊಡದೆ ತೆರಳುತ್ತಿದ್ದರು. ಈ ವೇಳೆ ರಿಯಾಝ್ ಮತ್ತು ಸಮೀಮ್ ಹಣ ಕೇಳಿದ್ದಾರೆ. ಬಳಿಕ ಮತ್ತೆ ಗೋಬಿ ನೀಡುವಂತೆ ಕೇಳಿದಾಗ ಯುವಕರು ಮೊದಲು ಹಣ ನೀಡುವಂತೆ ಕೇಳಿದ್ದಾರೆ. ಈ ವೇಳೆ ಗೋಬಿ ತರಲು ಕಳುಹಿಸಿದ್ದ ವ್ಯಕ್ತಿಗಳು ಹಣ ಕೇಳಿದ್ದನ್ನ ಕಂಡು ಕಾವೇರಿ ಬಾರ್ ಮೇಲ್ಭಾಗದ ಕಿಟಕಿಯಿಂದ ಮೂರು ಬಾರಿ ಗುಂಡು ಹಾರಿಸಿದ್ದಾರೆ.ಲೋಕೇಶ್ ಮತ್ತು ಅಕ್ರಂ ಎಂಬವರು ಗುಂಡಿನ ದಾಳಿ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳಕ್ಕೆ ಮಡಿಕೇರಿ ನಗರ ಪೊಲೀಸರು ಭೇಟಿ ನೀಡಿ ಓರ್ವನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ಘಟನಾ ಸ್ಥಳದಲ್ಲಿದ್ದ ಸಿಸಿ ಕ್ಯಾಮೆರಾವನ್ನೂ ಕೂಡ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


