ಬೆಂಗಳೂರು: ದೈಹಿಕ ಸಂಪರ್ಕಕ್ಕೆ ಒತ್ತಾಯಿಸಿ ಆಕೆ ನಿರಾಕರಿಸಿದಕ್ಕೆ ಚಾಕುವಿನಿಂದ ಕೊಲೆ ಮಾಡಲು ಯತ್ನಿಸಿ ಬಳಿಕ ಪೊಲೀಸರಿಗೆ ಯುವಕನೊಬ್ಬ ಶರಣಾಗಿರುವ ಘಟನೆ ನಗರದ ರಾಜರಾಜೇಶ್ವರಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ರಾಘವೇಂದ್ರ ಶಾಸ್ತ್ರಿ ಅಲಿಯಾಸ್ ರಘು ಪೊಲೀಸರಿಗೆ ಶರಣಾದ ಆರೋಪಿ. ಸಿರಿಶಾ ಎಂಬಾಕೆ ಹಲ್ಲೆಗೊಳಗಾದ ಮಹಿಳೆಯಾಗಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಇಬ್ಬರ ನಡುವೆಯೂ ಈಗಾಗಲೇ ಕೆಲ ದಿನಗಳಿಂದ ಅನೈತಿಕ ಸಂಬಂಧ ಇತ್ತು, ಆದರೆ ಮಂಗಳವಾರ ಆಕೆ ದೈಹಿಕ ಸಂಪರ್ಕಕ್ಕೆ ಒಪ್ಪದೇ ನಿರಾಕರಿಸಿದ್ದಕ್ಕೆ ಆರೋಪಿ ಚಾಕುವಿನಿಂದ ಎದೆ ಹಾಗೂ ಹೊಟ್ಟೆ ಭಾಗಕ್ಕೆ 10ಕ್ಕೂ ಹೆಚ್ಚು ಬಾರಿ ಚುಚ್ಚಿ ಕೊಲೆ ಮಾಡಲು ಯತ್ನಿಸಿದ್ದಾನೆ.ಈ ಹಿಂದೆಯೂ ರಘು ವಿವಾಹಿತ ಮಹಿಳೆಯನ್ನ ಪ್ರೀತಿಸಿ ದೈಹಿಕ ಸಂಪರ್ಕ ಇಟ್ಟುಕೊಂಡಿದ್ದ ಎಂಬ ಮಾಹಿತಿ ಲಭಿಸಿದ್ದು, ಬಳಿಕ ಸಿರಿಶಾರೊಂದಿಗೆ ಸಂಪರ್ಕ ಹೊಂದಿದ್ದ. ಆದರೆ ಮಹಿಳೆ ಕೆಲ ದಿನಗಳಿಂದ ಕೌಟುಂಬಿಕ ಕಾರಣ ಹೇಳಿ ಮಹಿಳೆ ದೂರವಾಗಿದ್ದಳು ಎನ್ನಲಾಗಿದ್ದು, ಫೋನ್‍ನಲ್ಲಿ ಮಾತ್ರ ಮಾತನಾಡುತ್ತಿದ್ದರು. ಈ ನಡುವೆ ಸಿರಿಶಾಳೊಂದಿಗೆ ಹಣಕಾಸಿನ ವ್ಯವಹಾರದ ಕುರಿತು ಮಾತನಾಡಬೇಕು ಎಂದು ಹೇಳಿ ರಘು ಬನಶಂಕರಿಗೆ ಕರೆದಿದ್ದ. ಆದರೆ ಸಿರಿಶಾ ಅಲ್ಲಿಗೆ ಬರಲು ನಿರಾಕರಿಸಿ ಆರ್ ಆರ್ ನಗರದ ಬಳಿ ಇರುವ ಆರ್ಮುಗಂ ದೇವಸ್ಥಾನಕ್ಕೆ ಬರಲು ತಿಳಿಸಿದ್ದಳು. ಇಬ್ಬರು ಕೆಲ ಸಮಯ ಮಾತುಕತೆ ನಡೆಸಿ ನೈಸ್ ರಸ್ತೆಗೆ ತೆರಳಿದ್ದಾರೆ. ಈ ವೇಳೆ ರಘು ಲೈಂಗಿಕ ಸಂಪರ್ಕಕ್ಕೆ ಒತ್ತಾಯ ಮಾಡಿದ್ದು, ಇದನ್ನು ನಿರಾಕರಿಸಿದ್ದ ಕಾರಣ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಬಳಿಕ ಚಾಕುವನ್ನು ಸ್ಥಳದಲ್ಲೇ ಬಿಟ್ಟು ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.ಆರೋಪಿ ರಘು, ಸಿರಿಶಾಳನ್ನು ಭೇಟಿ ಮಾಡುವ ಮೊದಲೇ ಕೊಲೆ ಮಾಡಲು ನಿರ್ಧರಿಸಿದ್ದ. ಇದರಂತೆ ನಗರದ ಇಟ್ಟಮಡುವಿನಲ್ಲಿ ಚಾಕು ಖರೀದಿಸಿ ಮಾಡಿದ್ದ. ಬಳಿಕ ಕದಿರೇನಹಳ್ಳಿಯ ಬಾರ್ ಒಂದರಲ್ಲಿ ಮದ್ಯ ಸೇವಿಸಿ ಮಹಿಳೆಯನ್ನು ಭೇಟಿ ಮಾಡಲು ತೆರಳಿದ್ದ. ನೈಸ್ ರಸ್ತೆಯ ಬ್ರಿಡ್ಜ್ ಬಳಿ ಇಬ್ಬರು ಭೇಟಿ ಆಗಿದ್ದ ಈ ವೇಳೆ ಘಟನೆ ನಡೆದಿದೆ. ಅಂದಹಾಗೇ ಆರೋಪಿ ರಘುಗೆ ಈಗಾಗಲೇ ಮದುವೆಯಾಗಿದ್ದು, ಇಬ್ಬರು ಮಕ್ಕಳು ಕೂಡ ಇದ್ದಾರೆ. ಘಟನೆ ಕುರಿತು ರಾಜರಾಜೇಶ್ವರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv Sign in to your account
Username or Email Address


Password

 Remember Me


