ಬೆಂಗಳೂರು: ನವರಾತ್ರಿ ಕೊನೆಯ ದಿನವಾದ ಇಂದು ದೇಶದೆಲ್ಲೆಡೆ ಆಯುಧಪೂಜೆಯ ಸಂಭ್ರಮ ಮನೆ ಮಾಡಿದ್ದು, ಜಯ ಕರ್ನಾಟಕ ಸಂಘಟನೆಯ ಮುಖ್ಯಸ್ಥ ಮುತ್ತಪ್ಪ ರೈ ಆಯುಧ ಪೂಜೆ ನಡೆಸಿದ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.ತಮ್ಮಲ್ಲಿದ್ದ ಕೋವಿ, ಮೆಷನ್ ಗನ್ ಗಳನ್ನು ಇಟ್ಟು ಮುತ್ತಪ್ಪ ರೈ ಪೂಜೆ ಸಲ್ಲಿಸಿದ್ದಾರೆ. ಪೂಜೆ ಸಲ್ಲಿಸುವ ವೇಳೆ ತೆಗೆದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಜನರು ಪೊಲೀಸರಿಗೆ ಪ್ರಶ್ನೆಗಳ ಸುರಿಮಳೆ ಕೇಳುತ್ತಿದ್ದಾರೆ.ಇಷ್ಟೊಂದು ಆಯುಧಗಳಿಗೆ ಸರ್ಕಾರದಿಂದ ಅನುಮತಿ ಇದೆಯೇ? ಪೊಲೀಸರ ಬಳಿ ಇವುಗಳಿಗೆ ದಾಖಲೆಗಳು ಇದ್ಯಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಸಿಸಿಬಿಯ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕಾರ ಮಾಡಿಕೊಂಡಿರುವ ಅಲೋಕ್ ಕುಮಾರ್ ಅವರಿಗೆ ಜನ ಪ್ರಶ್ನೆ ಮಾಡುತ್ತಿದ್ದಾರೆ.ಈ ಪ್ರಶ್ನೆಗೆ ಕೆಲವರು ಮುತ್ತಪ್ಪ ರೈ ಗನ್ ಮ್ಯಾನ್‍ಗಳ ಆಯುಧವನ್ನು ಇಟ್ಟು ಪೂಜೆ ಮಾಡಿರಬಹುದು ಎಂದು ಉತ್ತರಿಸುತ್ತಿದ್ದಾರೆ. ಒಟ್ಟಿನಲ್ಲಿ ಮೂರು ಫೋಟೋಗಳು ಈಗ ಫುಲ್ ವೈರಲ್ ಆಗಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


