ಕಲಬುರಗಿ: ಕೋರ್ಟ್‌ನಲ್ಲಿ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಘಟನೆ ಜಿಲ್ಲೆಯ ಆಳಂದ ತಾಲೂಕು ನ್ಯಾಯಾಲಯದಲ್ಲಿ ನಡೆದಿದೆ.ಆಳಂದ ತಾಲೂಕಿನ ನಿವಾಸಿ ಜೈ ಶಂಕರನಿಂದ ಈ ಕೃತ್ಯ ನಡೆದಿದ್ದು, ಕೋರ್ಟ್ ಕೆಲಸಕ್ಕೆ ಹೋಗಿ ಬರುವಾಗ ನಡು ರಸ್ತೆಯಲ್ಲಿ ಮೈ ಕೈ ಮುಟ್ಟಿ ಲೈಂಗಿಕ ದೌರ್ಜನ್ಯವನ್ನು ಮಾಡುತ್ತಿದ್ದ. ನೀನು ನನ್ನ ಜೊತೆ ಇರು ಅಂತ ಬಲವಂತವಾಗಿ ಒತ್ತಾಯ ಮಾಡಲಾಗಿದ್ದು, ಜೈಶಂಕರ್ ನ ಕಾಟಕ್ಕೆ ಬೇಸತ್ತ ಯುವತಿ ತಾಯಿಗೆ ಮಾಹಿತಿಯನ್ನು ನೀಡಿದ್ದಾರೆ.ಯುವತಿಯ ತಾಯಿ ಜೈ ಶಂಕರ್ ತಂದೆಯನ್ನ ಭೇಟಿ ಮಾಡಿ ಬುದ್ದಿ ಹೇಳಿ ದೂರ ಇರೋದಕ್ಕೆ ಹೇಳು ಅಂತ ಹೇಳಿದ್ದರು. ಯುವಕನ ಕುಟುಂಬದವರು ಕುಟುಂಬದವರು ಯುವತಿಯ ಮನೆ ಮುಂದೆ ಬಂದು ಯುವತಿಯ ಕೈ ಹಿಡಿದು ಎಳೆದಾಡಿ ಗಲಾಟೆ ಮಾಡಿದ್ದಾರೆ. ಇದರಿಂದಾಗಿ ನೊಂದ ಯುವತಿಯ ತಾಯಿ ಆಳಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


