ರಾಮನಗರ: ಜಿಲ್ಲೆಯ ಉಪಚುನಾವಣೆಗೆ ಜೆಡಿಎಸ್ ನಿಂದ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಪತ್ನಿ ಅನಿತಾ ಕುಮಾರಸ್ವಾಮಿಯವರು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಆಸ್ತಿ ಮೌಲ್ಯದ ಪ್ರಕಾರ ಕೋಟಿ ಆಸ್ತಿಗೆ ಒಡತಿಯಾಗಿದ್ದಾರೆ.ಕಾರ್ಯಕರ್ತರ ಜೊತೆ ಮೆರವಣಿಗೆಯೊಂದಿಗೆ ಆಗಮಿಸಿದ ಅವರು ಪತಿ ಸಿಎಂ ಕುಮಾರಸ್ವಾಮಿಯವರೊಂದಿಗೆ ನಾಮಪತ್ರ ಸಲ್ಲಿಸಿದರು. ಒಟ್ಟು 64,22,61,822 ರೂಪಾಯಿ ಚರಾಸ್ತಿಯನ್ನು ಹೊಂದಿದ್ದು, ಇದರಲ್ಲಿ 8,14,86,685 ರೂಪಾಯಿ ಸಾಲವನ್ನು ಹೊಂದಿದ್ದಾರೆ. ಅಲ್ಲದೇ ಅನಿತಾ ಕುಮಾರಸ್ವಾಮಿಯವರ ವಾರ್ಷಿಕ ಆದಾಯ 76,35,650 ರೂ. ಆಗಿದೆ.ಏನೆಲ್ಲಾ ಇದೆ ಅನಿತಾ ಕುಮಾರಸ್ವಾಮಿಯವರ ಬಳಿ?
ಸದ್ಯ ಕೈಯಲ್ಲಿ 42,36,638 ರೂಪಾಯಿ ಹಣ ಇದ್ದು, ಬ್ಯಾಂಕುಗಳಲ್ಲಿ 1,90,88,775 ರೂಪಾಯಿ ಇಟ್ಟಿದ್ದಾರೆ. ಇದಲ್ಲದೇ ವಿವಿಧ ಕಂಪೆನಿಗಳು ಹಾಗೂ ಷೇರು ಮಾರುಕಟ್ಟೆ ಮೇಲೆ 68,79,58,000 ರೂ. ಹೂಡಿಕೆ ಮಾಡಿದ್ದಾರೆ. ಇದರ ಜೊತೆ 93,30,000 ರೂ. ಚಿನ್ನಾಭರಣವನ್ನು ಹೊಂದಿದ್ದು, ಇದರಲ್ಲಿ 2.6 ಕೆಜಿ ಚಿನ್ನಾಭರಣ, 17 ಕೆಜಿ ಬೆಳ್ಳಿ ಹಾಗೂ 40 ಗ್ರಾಂ ಕ್ಯಾರೇಟ್ ಡೈಮಂಡ್ ಇದೆ.ಇದಲ್ಲದೆ ಬೆಂಗಳೂರಿನ ಜಯನಗರದ 4ನೇ ಬ್ಲಾಕ್‍ನಲ್ಲಿ 14 ಕೋಟಿ ರೂ. ಹಾಗೂ ದೊಡ್ಡನಕುಂಟೆ ಬಳಿ 16 ಕೋಟಿ ರೂ. ಮೌಲ್ಯದ ವಾಣಿಜ್ಯ ಕಟ್ಟಡಗಳನ್ನು ಹೊಂದಿದ್ದಾರೆ. 28,29,557 ರೂ ಮೌಲ್ಯದ ಹಾರ್ಲೇ ಡೆವಿಡ್ಸನ್ ಬೈಕ್ ಹಾಗೂ ಪ್ರಚಾರದ ಬಸ್ ಒಂದನ್ನು ಹೊಂದಿದ್ದಾರೆ. 2013 ರಲ್ಲಿ ಚನ್ನಪಟ್ಟಣ ವಿಧಾನಸಭೆಗೆ ಸ್ಪರ್ಧಿಸಿದಾಗ ಅನಿತಾ ಕುಮಾರಸ್ವಾಮಿ ಆಸ್ತಿ 137,96,87,114 ರೂ. ಆಸ್ತಿ ಹೊಂದಿದ್ದರು. ಇದನ್ನೂ ಓದಿ: ರಾಮನಗರದಲ್ಲಿ ಕೋಟ್ಯಧಿಪತಿಗಳ ಸ್ಪರ್ಧೆ: ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ಆಸ್ತಿ ಎಷ್ಟಿದೆ?2013ರ ಆಸ್ತಿ ವಿವರ:ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


