ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಭೂ ಮಾಫಿಯಾ ಮಟ್ಟಹಾಕಲು ಸಿಎಂ ಕುಮಾರಸ್ವಾಮಿ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಭೂಗಳ್ಳರನ್ನು ಮಟ್ಟ ಹಾಕಲು ಚಿಕ್ಕಮಗಳೂರು ಎಸ್‍ಪಿ ಅಣ್ಣಾಮಲೈ ಬೆಂಗಳೂರಿಗೆ ಬರುತ್ತಿದ್ದಾರೆ.ಬೆಂಗಳೂರಿನ ರಿಯಲ್ ಎಸ್ಟೇಟ್ ಹಾಗು ಭೂ ಮಾಫಿಯಾ ಕಡಿವಾಣಕ್ಕೆ ಸೆಪರೇಟ್ ವಿಂಗ್ ಮಾಡಲು ನಿರ್ಧರಿಸಿದ್ದಾರಂತೆ. ಖಡಕ್ ಸೂಪರ್ ಕಾಪ್ ಚಿಕ್ಕಮಗಳೂರು ಎಸ್‍ಪಿ ಅಣ್ಣಾಮಲೈ ನೇತೃತ್ವದಲ್ಲಿ ಸೆಪರೇಟ್ ವಿಂಗ್ ಮಾಡಲು ಸಿಎಂ ನಿರ್ಧರಿಸಿದ್ದಾರೆ. ಈಗಾಗಲೇ ಸಿಲಿಕಾನ್ ಸಿಟಿಯಲ್ಲಿ ಸಾಕಷ್ಟು ಬಡವರ ಆಸ್ತಿ ಭೂ ಗಳ್ಳರ ಪಾಲಾಗಿದೆ. ಸದ್ಯ ಇಂತಹ ಭೂಗಳ್ಳರನ್ನು ಮಟ್ಟ ಹಾಕಲು ಎಸ್‍ಪಿ ಅಣ್ಣಾಮಲೈ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಲಿದೆ.ಸದ್ಯ ಚಿಕ್ಕಮಗಳೂರು ಎಸ್‍ಪಿಯಾಗಿ ಅಣ್ಣಾಮಲೈ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗಾಗಲೇ ಮೀಟರ್ ಬಡ್ಡಿ, ಮಟ್ಕ, ಜೂಜು ಅಡ್ಡೆಗಳನ್ನು ಎಚ್‍ಡಿಕೆ ನಿರ್ಣಾಮ ಮಾಡಿಸುತ್ತಿದ್ದಾರೆ. ಅಲೋಕ್ ಕುಮಾರ್ ಮತ್ತು ಗಿರೀಶ್‍ರಂಥ ಅಧಿಕಾರಿಗಳನ್ನು ಸಿಸಿಬಿಗೆ ಹಾಕಿ ಸಿಎಂ ದಂಧೆಕೋರರಿಗೆ ಬಿಸಿ ಮುಟ್ಟಿಸುತ್ತಿದ್ದಾರೆ. ಇದೀಗ ಭೂ ಮಾಫಿಯಾಗೆ ಸೆಪರೇಟ್ ವಿಂಗ್ ಮಾಡಿ ಅಣ್ಣಾಮಲೈ ಅವರನ್ನು ಕರೆ ತರುವ ಐತಿಹಾಸಿಕ ನಿರ್ಧಾರ ಮಾಡಿದ್ದಾರೆ. ಸದ್ಯ ಕೆಲವೇ ದಿನಗಳಲ್ಲಿ ಬೆಂಗಳೂರಿಗೆ ಸೂಪರ್ ಕಾಪ್ ಎಸ್‍ಪಿ ಅಣ್ಣಾಮಲೈ ಎಂಟ್ರಿ ಕೊಡಲಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


