ಮೈಸೂರು: ಸಾಂಸ್ಕೃತಿಕ ನಗರಿ ನಾಡಹಬ್ಬ ಮೈಸೂರು ದಸರಾದಲ್ಲೂ ಮೀಟೂ ಸದ್ದು ಕೇಳು ಬರುತ್ತಿದೆ. ಯುವತಿಯರ ಸ್ತನ ಹಾಗೂ ಪ್ರೈವೇಟ್ ಪಾರ್ಟ್ ಮುಟ್ಟಿ ಚೆನ್ನಾಗಿದೆ ಅಂತ ಕಾಮುಕರು ಅನುಚಿತವಾಗಿ ವರ್ತಿಸಿದ್ದಾರೆ.ಮೈಸೂರಿನ ಕೃಷ್ಣರಾಜ ಬುಲೆವಾರ್ಡ್ ರಸ್ತೆಯಲ್ಲಿ ಅಕ್ಟೋಬರ್ 13ರಂದು ಈ ಘಟನೆ ನಡೆದಿದೆ. ಓಪನ್ ಸ್ಟ್ರೀಟ್ ಫೆಸ್ಟಿವಲ್‍ನಲ್ಲಿ ಬೀದಿ ಕಾಮಣ್ಣರ ಕಾಟ ಹೆಚ್ಚಾಗಿದ್ದು, ಸ್ಟ್ರೀಟ್ ಫೆಸ್ಟಿವಲ್‍ಗೆ ಬಂದಿದ್ದ ಯುವತಿಯರ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ.ಇಬ್ಬರು ಯುವತಿಯನ್ನು ಸ್ಪರ್ಶಿಸಿ ಕ್ಷಮೆ ಕೇಳುವಂತೆ ಪುಂಡ ಯುವಕ ಗುಂಪು ನಾಟಕವಾಡಿದೆ. ಸದ್ಯ ಈ ಬಗ್ಗೆ ಯುವತಿಯರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ನೊಂದ ಯುವತಿಯರ ಪೋಸ್ಟ್ ಗೆ ಹಲವು ಯುವತಿಯರು ದನಿಗೂಡಿಸಿದ್ದಾರೆ. ನಮಗೂ ಇದೇ ರೀತಿಯ ತೊಂದರೆಯಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಲವು ಯುವತಿಯರು ಪೋಸ್ಟ್ ಮಾಡಿದ್ದಾರೆ. ಟ್ವಿಟ್ಟರಿನಲ್ಲಿ ಟ್ಯಾಗ್ ಮಾಡಿ ಯುವತಿಯರು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಯುವತಿಯೊಬ್ಬರು ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ.ನಾನು ಇಬ್ಬರು ವಿದೇಶಿ ಪ್ರಜೆಗಳ ಜೊತೆ ಇದ್ದೆ. ಈ ವೇಳೆ ಯುವಕರು ನಮ್ಮ ಹತ್ತಿರ ಬಂದು ನಮ್ಮ ದೇಹದ ಅಂಗಗಳ ಬಗ್ಗೆ ಮಾತನಾಡಲು ಶುರು ಮಾಡಿದರು. ಅಲ್ಲದೇ ಯಾರಿಗೆ ಯಾವ ದೇಹದ ಅಂಗ ಚೆನ್ನಾಗಿದೆ ಎಂದು ಮಾತನಾಡಲು ಶುರು ಮಾಡಿದರು. ಆ ಯುವಕರು ಮಾತನಾಡುತ್ತಿರುವುದು ವಿದೇಶಿ ಪ್ರಜೆಗಳಿಗೆ ಅರ್ಥವಾಗಲಿಲ್ಲ. ನಾನು ಆ ಯುವಕರನ್ನು ತರಾಟೆಗೆ ತೆಗೆದುಕೊಳ್ಳುವ ಮೊದಲೇ ಅವರು ಅಲ್ಲಿಂದ ಹೊರಟು ಹೋದರು. ನಂತರ ಅವರು ಮತ್ತೆ ಕಾಣಿಸಿಕೊಂಡಾಗ ಪ್ರಶ್ನಿಸಿದ್ದಾಗ ಅವರು ಏನು ತಿಳಿಯದಂತೆ ನಡೆದುಕೊಂಡರು ಎಂದು ಯುವತಿಯೊಬ್ಬರು ಪೋಸ್ಟ್ ಮಾಡಿದ್ದಾರೆ.ಸದ್ಯ ಸುರಕ್ಷತಾ ದೃಷ್ಟಿಯಿಂದ ಪೋಸ್ಟ್ ಮಾಡಿದ ಯುವತಿಯರ ಹೆಸರುಗಳನ್ನು ಮೈಸೂರು ಮೀಮ್ಸ್ ಬಹಿರಂಗಗೊಳಿಸದೇ ಪೋಸ್ಟ್ ಗಳನ್ನು ಹಾಕಿದೆ. ಜಿಲ್ಲಾಧಿಕಾರಿ, ಸಚಿವರು ಹಾಗೂ ಪ್ರಧಾನಿ ಮೋದಿಗೆ ಟ್ಯಾಗ್ ಮಾಡಿ ಸಾಂಪ್ರದಾಯಿಕ ದಸರಾದಲ್ಲಿ ಇದು ಸರಿಯೇ ಎಂದು ಪ್ರಶ್ನಿಸಿ ಪೋಸ್ಟ್ ಮಾಡಲಾಗಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


