ಮಂಡ್ಯ: ಹೊಲದಲ್ಲಿ ಹಾವು ಕಚ್ಚಿದ್ದರಿಂದ ರೊಚ್ಚಿಗೆದ್ದ ರೈತರೊಬ್ಬರು ಹಾವನ್ನು ಎರಡು ತುಂಡು ಮಾಡಿ ಮೃತಪಟ್ಟಿರುವ ಘಟನೆ ಮಂಡ್ಯದ ಯತ್ತಾಂಬಾಡಿಯಲ್ಲಿ ನಡೆದಿದೆ.ದೊಡ್ಡ ಚನ್ನೀಪುರ ಗ್ರಾಮದ ಮಾದೇಗೌಡರ ಮಗ ಪುಟ್ಟಮಾದು ಮೃತ ದುರ್ದೈವಿ. ಪುಟ್ಟಮಾದು ತನ್ನ ಅಕ್ಕನವರ ತೋಟದಿಂದ ರೇಷ್ಮೆ ಹುಳುವಿಗೆ ಹಿಪ್ಪುನೇರಳೆ ಸೊಪ್ಪು ಕೊಯ್ಯುತ್ತಿದ್ದಾಗ ವಿಷಪೂರಿತ ಕೊಳಕ ಮಂಡಲ ಹಾವು ಕಚ್ಚಿದೆ.ಕಚ್ಚಿದ್ದಕ್ಕೆ ಸಿಟ್ಟಾದ ಪುಟ್ಟಮಾದು ಸೊಪ್ಪ ಕೊಯ್ಯಲು ತಂದಿದ್ದ ಕತ್ತಿಯಲ್ಲಿ ಆ ಹಾವನ್ನು ಎರಡು ತುಂಡಾಗಿ ಕತ್ತರಿಸಿದ್ದಾರೆ. ಹಾವು ಕಚ್ಚಿದ ವಿಚಾರ ತಿಳಿದು ಸ್ಥಳೀಯರು ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲು ಮುಂದಾದಾಗ ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾರೆ.ಮೃತ ಪುಟ್ಟಮಾದು ಅವರಿಗೆ ಒಂದು ಗಂಡು ಒಂದು ಹೆಣ್ಣು ಮಕ್ಕಳಿದ್ದು, ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


