ದಾವಣಗೆರೆ: ದುರ್ದೈವ  ಎನ್ನುವುದಕ್ಕೆ ಸಾಕ್ಷಿ ಎಂಬಂತೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನಲ್ಲಿ ತಾಯಿ-ಮಗು ಸಿಡಿಲಿಗೆ ಬಲಿಯಾಗಿದ್ದು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.ಹರಪನಹಳ್ಳಿ ತಾಲೂಕಿನ ಚನ್ನಳ್ಳಿ ತಾಂಡ ನಿವಾಸಿ ಕವಿತಾಬಾಯಿ (33) ಹಾಗೂ ಪವಿತ್ರಾ(12) ಮೃತ ದುರ್ದೈವಿಗಳು. ಕವಿತಾಬಾಯಿ ಅವರು ಪುಟ್ಟ ಕಂದಮ್ಮನ ಜೊತೆಗೆ ತಾಂಡಾ ಸಮೀಪದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಸ್ವಲ್ಪ ಪ್ರಮಾಣದಲ್ಲಿ ಮಳೆ ಕಾಣಿಸಿಕೊಂಡಿದೆ. ಇದರಿಂದಾಗಿ ಮಗಳ ಜೊತೆಗೆ ಮನೆಗೆ ಮರಳುತ್ತಿದ್ದಾಗ, ದಿಢೀರ್ ಸಿಡಿಲು ಬಡಿದ ಪರಿಣಾಮ ತಾಯಿ ಮಗಳು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.ಈ ಕುರಿತು ಮಾಹಿತಿ ಪಡೆದು, ಸ್ಥಳಕ್ಕೆ ಆಗಮಿಸಿದ ಹರಪನಹಳ್ಳಿ ಪೊಲೀಸರು ಹಾಗೂ ತಹಶೀಲ್ದಾರ್ ಭೇಟಿ ಪರಿಶೀಲನೆ ನಡೆಸಿದರು. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


