ಬಾಗಲಕೋಟೆ: ಎದುರಿಗೆ ವೇಗವಾಗಿ ಬಂದ ಬೈಕಿಗೆ ಡಿಕ್ಕಿ ಹೊಡೆಯೋದನ್ನು ತಪ್ಪಿಸಲು ಹೋಗಿ ಕಾಂಕ್ರೀಟ್ ಸಾಗಿಸುತ್ತಿದ್ದ ಲಾರಿ ಪಲ್ಟಿಯಾಗಿ, ಚಾಲಕ ವಾಹನದಲ್ಲೇ ಸಿಲುಕಿ ಕೆಲಕಾಲ ನರಳಾಡಿದ ಘಟನೆ ಜಿಲ್ಲೆಯ ಬಾದಾಮಿ ತಾಲೂಕಿನ ಚಿಮ್ಮಲಗಿ ಗ್ರಾಮದ ಬಳಿ ನಡೆದಿದೆ.26 ವರ್ಷದ ರವಿ ಯಾದವ್ ಎಂಬ ವ್ಯಕ್ತಿಯೇ ಲಾರಿಯಲ್ಲಿ ಸಿಲುಕಿ ನರಳಾಡಿದ ಚಾಲಕ. ಬಾದಾಮಿಯಿಂದ ಐಹೊಳೆ ರಾಜ್ಯ ಹೆದ್ದಾರಿ ಕಾಮಗಾರಿಗಾಗಿ ಲಾರಿ ಮೂಲಕ ಕಾಂಕ್ರೀಟ್ ಸಾಗಿಸುತ್ತಿದ್ದರು. ಈ ವೇಳೆ ನಸುಕಿನ ಜಾವ ಚಿಮ್ಮಲಗಿ ಗ್ರಾಮದ ಬಳಿ ಎದುರಿನಿಂದ ವೇಗವಾಗಿ ಬೈಕ್ ಬರುತ್ತಿರೋದನ್ನ ಕಂಡ ಲಾರಿ ಚಾಲಕ ರವಿ, ಬೈಕ್ ಸವಾರನನ್ನ ಅಪಘಾತದಿಂದ ಪಾರು ಮಾಡಲು ಹೋದಾಗ, ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ. ಹೀಗಾಗಿ 2 ಗಂಟೆ ಕಾಲ ಲಾರಿ ಚಾಲಕ ರವಿ ವಾಹನದಲ್ಲೇ ಸಿಲುಕಿ ನರಳಾಡಿದ್ದಾನೆ.ಕಾರ್ಮಿಕರು ಹಾಗೂ ಜೆಸಿಬಿ ಮೂಲಕ ಲಾರಿ ಚಾಲಕ ರವಿ ಯಾದವ್ ನನ್ನು ಲಾರಿಯಿಂದ ಹೊರತೆಗೆದು ರಕ್ಷಿಸಲಾಗಿದೆ. ಸದ್ಯ ಲಾರಿ ಚಾಲಕ ರವಿ ಕೈ ಕಾಲುಗಳಿಗೆ ಸಣ್ಣ, ಪುಟ್ಟಗಾಯಗಳಾಗಿವೆ. ಅದೃಷ್ಟವಷಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvSign in to your account
Username or Email Address


Password

 Remember Me


